ಧರ್ಮಸ್ಥಳ ಗ್ರಾಮದಲ್ಲಿ ರಾತ್ರಿಯಿಂದ ಬೆಳಗಿನವರೆಗೆ ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ಪಂಚಾಯಿತಿ ಸದಸ್ಯರು ಸಿಬ್ಬಂದಿಗಳು ಮತ್ತು ಗ್ರಾಮಸ್ಥರಿಂದ ರಾತ್ರಿಯಿಡೀ ಗಸ್ತು !

ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ -19 ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಹಾಗೂ ಹೊರಜಿಲ್ಲೆಗಳಿಂದ ಆಗಮಿಸುವವರ ಬಗ್ಗೆ ವಿಶೇಷ ರೀತಿಯಿಂದ ನಿಗಾವಹಿಸಲಾಗಿದೆ.

ಧರ್ಮಸ್ಥಳ ಗ್ರಾಮದ ಕಲ್ಲೇರಿ, ನೀರ ಚಿಲುಮೆ, ಮುಂಡ್ರಪ್ಪಾಡಿ, ಗಡಿಭಾಗದಲ್ಲಿ ಪೊಲೀಸ್ ಇಲಾಖೆಯಿಂದ ಹಾಗೂ ಗ್ರಾಮ ಕಾರ್ಯ ಪಡೆಯಿಂದ ತಂಡವನ್ನು ರಚಿಸಲಾಗಿದ್ದು ಆಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ರಾತ್ರಿಯಿಂದ ಬೆಳಗಿನವರೆಗೆ ಅಲ್ಲಲ್ಲಿ ಚೆಕ್ ಪೋಸ್ಟಗಳನ್ನು ಹಾಕಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪೊಲೀಸರನ್ನು ಒಳಗೊಂಡಂತೆ ಒಂದು ವಿಭಿನ್ನ ರೀತಿಯಲ್ಲಿ ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸುತ್ತಿರುವ ಎಲ್ಲಾ ವಾಹನಗಳ ತಪಾಸಣೆಯನ್ನು ಮಾಡಿಕೊಂಡು ಬರುತ್ತಿರುವ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅನಾವಶ್ಯಕವಾಗಿ ವಾಹನ ತಿರುಗಾಟ ರಾತ್ರಿ ಹೊತ್ತಿನಲ್ಲಿ ಆಗುತ್ತಿತ್ತು. ಬೆಂಗಳೂರು ಹಾಗೂ ಮುಂತಾದ ಕಡೆಗಳಿಂದ ಸಾರ್ವಜನಿಕ ಗ್ರಾಮಕ್ಕೆ ಬರುವುದು ಕಂಡುಬರುತ್ತಿದೆ. ಇದನ್ನು ಮನಗೊಂಡ ಸ್ಥಳೀಯ ಪೊಲೀಸ್ ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಾಗಿ ಹಗಲು-ರಾತ್ರಿಯೆನ್ನದೆ ದುಡಿಯುತ್ತಿರುವುದು ಕಂಡುಬರುತ್ತಿದೆ.

ನಿನ್ನೆ ರಾತ್ರಿಯ ವೇಳೆ 75 ವಾಹನಗಳನ್ನು ತಡೆಹಿಡಿದು 159 ಜನರನ್ನು ತಪಾಸಣೆ ನಡೆಸಿ ಧರ್ಮಸ್ಥಳ ಗ್ರಾಮಕ್ಕೆ ಹೊರ ಜಿಲ್ಲೆಯಿಂದ ಆಗಮಿಸಿದ 13 ಜನರನ್ನು ಆರೋಗ್ಯ ತಪಾಸಣೆ ನಡೆಸಿ ಮನೆಯಿಂದ ಹೊರಗೆ
ಹೋಗದಂತೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ತಪಾಸಣೆ ವೇಳೆ ಹೆಚ್ಚಿನವರು ಬೆಂಗಳೂರಿನಿಂದ ಬಂದವರಾಗಿದ್ದು, ಉಡುಪಿ
ಜಿಲ್ಲೆಗೆ ಹೋಗುವವರಾಗಿರುತ್ತಾರೆ. ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿಉಪಾಧ್ಯಕ್ಷ ಪಿ .ಶ್ರೀನಿವಾಸರಾವ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಗೌಡ, ಹರೀಶ್ ಸುವರ್ಣ, ಹರ್ಷಿತ್ ಜೈನ್, ರವಿಕುಮಾರ್, ದಿನೇಶ್ ರಾವ್, ಮುರಲೀಧರ ದಾಸ್, ಸುಧಾಕರ ನಡುಗುಡ್ಡೆ, ಹಾಗೂ ಗ್ರಾಮ ಕಾರ್ಯಪಡೆ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಯಂಸೇವಕರು ಇದ್ದು ಸಹಕರಿಸಿದರು.

ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಆಗಮಿಸುವವರ ಮಾಹಿತಿಯನ್ನು ಧರ್ಮಸ್ಥಳ ಗ್ರಾಮ ಕಾರ್ಯಪಡೆಗೆ ನೀಡಿ ಸಹಕರಿಸುವಂತೆ ಗ್ರಾಮಸ್ಥರನ್ನು ವಿನಂತಿಸಲಾಗಿದೆ.

Leave A Reply

Your email address will not be published.