ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ಕೋವಿಡ್ ಅಂತ್ಯ ಸಂಸ್ಕಾರ ತರಬೇತಿ ಮತ್ತು ತಂಡ ರಚನೆ

ಸುಳ್ಯ,ಮೇ 05:- ಪ್ರತಿನಿತ್ಯ ಕೋವಿಡ್ ಪ್ರಕರಣ ಗಳು ಹೆಚ್ಚುತ್ತಿದ್ದು ಈ ವೈರಸ್ ನಿಂದ ಮೃತಪಟ್ಟರೆ ಸ್ವತಃ ಕುಟುಂಬಿಕರೇ ಮೃತ ಶರೀರವನ್ನು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಪಿಎಫ್ಐ ದೇಶದೆಲ್ಲೆಡೆ ಕೊರೋನಾ ಬಾದಿತವಾಗಿ ಮೃತಪಟ್ಟ ಮೃತದೇಹವನ್ನು ಗೌರವಪೂರ್ವಕವಾಗಿ ಆಯಾಯ ಧರ್ಮಕ್ಕನುಸಾರವಾಗಿ ದಫನ ಕಾರ್ಯ ನಡೆಸುತ್ತಿದ್ದು,ಇದರ ಭಾಗವಾಗಿ ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಷನ್ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ತನ್ನ ಕಾರ್ಯಕರ್ತರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡು ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ತಲಾ ಆರು ಮಂದಿಯ ಮೂರು ತಂಡಗಳನ್ನು ರಚಿಸಲಾಯಿತು.

ವ್ಯಾಪ್ತಿ ಮತ್ತು ಉಸ್ತುವಾರಿಗಳು

▪️ಖಾದರ್ ಸುಳ್ಯ :- ಸುಳ್ಯ ನಗರ
▪️ರಝಾಕ್ ಪೈಚಾರ್:- ಪೈಚಾರ್,ಅಡ್ಕಾರ್,ದುಗ್ಗಲಡ್ಕ,ಗುತ್ತಿಗಾರು
▪️ಫಾರೂಕ್ ನಿಂತಿಕಲ್:- ಬೆಳ್ಳಾರೆ, ನಿಂತಿಕಲ್ ,ಪಂಜ

ರಫೀಕ್ ಎಂ.ಎ ಸವಣೂರು ತರಬೇತಿ ನೀಡಿದರು

ಯಾವುದೇ ಧರ್ಮದ ವ್ಯಕ್ತಿಗಳು ಕೋವಿಡ್ ಭಾದಿತವಾಗಿ ಮೃತಪಟ್ಟರು ಕುಟುಂಬದ ಒಪ್ಪಿಗೆಯೊಂದಿಗೆ ದಫನ ಮಾಡಲು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ತಂಡ ಸನ್ನದ್ದವಾಗಿದೆ ಎಂದು ಪಿಎಫ್ಐ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸಂಪರ್ಕ ಸಂಖ್ಯೆ:-
+91 99023 36883
(ಫೈಝಲ್ ಬೆಳ್ಳಾರೆ)

+91 99003 88650
(ರಝ್ಝಾಕ್ ಪೈಚಾರ್)

+918105400243
(ಫಾರೂಕ್ ನಿಂತಿಕಲ್)

Leave A Reply

Your email address will not be published.