ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಸಿಇಒ ಬ್ಯಾಂಕ್ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ
ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮೇ.3) ನಡೆದಿದೆ.
ಇವರು ಇಂದು ಬೆಳಿಗ್ಗೆ 7.30 ರ ವೇಳೆ ಕಛೇರಿಗೆ ಬಂದವರು ತಮ್ಮ ಹಾಜರಿಯನ್ನು ನಮೂದಿಸಿದ್ದರು. ಇಂದು ಮದ್ಯಾಹ್ನ ಬ್ಯಾಂಕಿನ ಸಂಘದ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಧ್ಯಾಹ್ನ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ
ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಿನ್ನೆಯಷ್ಟೇ ಧರ್ಮಸ್ಥಳದ ಅವರು ವಾಸವಿರುವ ಮನೆಯೂ ಸೇರಿದಂತೆ ಬೋಳಿಯಾರು ಪ್ರದೇಶದಲ್ಲಿ ಕ್ವರ0ಟೈನ್ ಘೋಷಿಸಲಾಗಿತ್ತು.
ದತ್ತರಿಗೆ ಇತ್ತೀಚೆಗಷ್ಟೇ ಪ್ರಮೋಷನ್ ಆಗಿತ್ತು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.