ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್
ಪುತ್ತೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ಜನತಾ ಕರ್ಫ್ಯೂ ವಿಧಿಸಿದೆ.
ಇದರಿಂದಾಗಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದರೂ, ಪುತ್ತೂರಿನ ಗೂಡಂಗಂಡಿಯಲ್ಲಿ ಬಾಟಲಿಯ ಶಬ್ದ ಕೇಳಿ ಬರುತ್ತಿತ್ತು.
ಕಾರಣ ಹುಡುಕಿದರೆ ಆ ಗೂಡಂಗಡಿಯೊಂದರಲ್ಲಿ ಇಬ್ಬರು ಮದ್ಯ ಸೇವಿಸುತ್ತಿರುವುದು ಗಮನಕ್ಕೆ ಬಂದಿದೆ.
ಈ ಘಟನೆ ಮೆ.2ರಂದು ಬೆಳಿಗ್ಗೆ ನಡೆದಿದ್ದು, ಪುತ್ತೂರಿನ ಕೋರ್ಟ್ ರಸ್ತೆಯ ಬಳಿ ಪಶು ಸಂಗೋಪನಾ ಇಲಾಖೆಯ ಮುಂಭಾಗದಲ್ಲಿರುವ ಸಣ್ಣ ಗೂಡಂಗಡಿಯೊಂದರ ಬಾಗಿಲು ತೆರೆದು ವ್ಯಕ್ತಿಗಳಿಬ್ಬರು ಬೆಳಿಗ್ಗಿನ ವೇಳೆಯೇ ಪಟ್ಟಾಗಿ ಕುಳಿತು ಎಣ್ಣೆ ಹೇರಿದ್ದಾರೆ.
ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್ ಹಾಗೂ ಕೋವಿಡ್ ಮಾರ್ಷಲ್ಗಳು ನಗರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಗೂಡಂಗಡಿ ಶಟರ್ ತೆರೆದು ಮದ್ಯ ಸೇವಿಸುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಪಾರ್ಟಿಿಬಹುತೇಕ ಮುಗಿದಿತ್ತು. ಅಮಲು ಮಾತ್ರ ಉಳಿದಿತ್ತು !
ಕೂಡಲೇ ಸ್ಥಳಕ್ಕೆ ತೆರಳಿದ ಅವರು ಮದ್ಯಪಾನ ಮಾಡುತ್ತಿರುವವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಆದರೆ, ಮದ್ಯದ ಅಮಲಿನಲ್ಲಿದ್ದವರಿಗೆ ಸುಲಭವಾಗಿ ಅಂಗಡಿ ಒಳಗಿಂದ ಹೊರ ಬರುವುದು ಸಾಧ್ಯವಾಗಲಿಲ್ಲ. ತೂರಾಡುತ್ತಾ ಹೊರಬಂದ ಅವರನ್ನು ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.