ಒಂದು ಕೋರ್ಟಿನ ವಿರುದ್ದ ಮತ್ತೊಂದು ಕೋರ್ಟಿನಲ್ಲಿ ದೂರು | ಏನಿದು ವಿಚಿತ್ರ ಪ್ರಕರಣ ?!
ಒಂದು ಕೋರ್ಟಿನ ವಿರುದ್ಧ ಮತ್ತೊಂದು ಕೋರ್ಟಿನಲ್ಲಿ ದೂರು ನೀಡಿದ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಚುನಾವಣಾ ಆಯೋಗವುಜ್ ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ದೂರು ದಾಖಲಿಸಿದೆ. ಚುನಾವಣಾ ಆಯೋಗದ ಈ ನಡೆ ಅಚ್ಚರಿ ಮೂಡಿಸಿದೆ.
ಕೋವಿಡ್ 2ನೇ ಅಲೆಯಿದ್ದರೂ ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿ ಮತ್ತು ಸಮಾವೇಶಗಳನ್ನು ತಡೆಯದ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕಳೆದ ಏಪ್ರಿಲ್ 26 ರಂದು ಪಿಐಎಲ್ ಒಂದರ ವಿಚಾರಣೆ ವೇಳೆ ಹೇಳಿತ್ತು.
ಈ ಬಗ್ಗೆ ಸುಪ್ರೀಂಗೆ ದೂರು ನೀಡಿರುವ ಚುನಾವಣಾ ಆಯೋಗ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಒಂದು ಸ್ವಾಯತ್ತ ಸಂಸ್ಥೆ ಮತ್ತೊಂದು ಸ್ವಾಯತ್ತ ಸಂಸ್ಥೆ ಮೇಲೆ ಯಾವುದೇ ಪೂರ್ವಾಪರ ವಿಚಾರಿಸದೆ ಅವಮಾನಕರವಾದ ಹಾಗೂ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದೆ. ಈ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದೆ.
ಇದರ ಜತೆಗೆ ಮೇ 2 ರಂದು ಭಾನುವಾರ ನಾಲ್ಕು ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದರ ಫಲಿತಾಂಶದ ಬಳಿಕ ಯಾವುದೇ ರೀತಿಯ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಆದೇಶ ಮಾಡಿದೆ.