ಬೆಂಗಳೂರಿನಲ್ಲಿ ಮೃತಪಟ್ಟ ಪುತ್ತೂರು ಮೂಲದ ವ್ಯಕ್ತಿ | ಶಾಸಕರ ವಾರ್ ರೂಂ ಸಹಾಯದಿಂದ ಪುತ್ತೂರಿಗೆ ತಂದು ಅಂತ್ಯ ಸಂಸ್ಕಾರ
ಪುತ್ತೂರು ತಾಲೂಕು ಇಲ್ಲಿನ ಪೆರ್ಲಂಪಾಡಿ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದರು. ಇದೀಗ ಅವರ ಮೃತ ದೇಹವನ್ನು ಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದ ಮೂಲದಲ್ಲಿ ಪೆರ್ಲಂಪಾಡಿಯ 55 ವರ್ಷ ಪ್ರಾಯದ ಇವರು ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಾಗಿದ್ದು, ನಂತರ ಆಸ್ಪತ್ರೆ ಸೇರಿದ್ದರು. ಆದರೆ
ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದರು.
ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತುಂಬಾ ಕಾಯಬೇಕಾದ ಹಿನ್ನೆಲೆಯಲ್ಲಿ, ತಕ್ಷಣ ವ್ಯವಸ್ಥೆ ಮಾಡಲು ಪುತ್ತೂರಿನ ಶಾಸಕರ ವಾರ್ ರೂಮ್ ಸಹಾಯ ಮಾಡಿದೆ.
ಅದರಂತೆ ಬೆಂಗಳೂರಿನಿಂದ ಅಂಬುಲೆನ್ಸ್ ನ ಮೂ ಶವವನ್ನು ಪುತ್ತೂರಿಗೆ ತಂದು ಇಲ್ಲಿ ಮೃತರ ಮಕ್ಕಳು ಮತ್ತು ಸಂಬಂಧಿಕರು ಕೋವಿಡ್ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಶಾಸಕರ ವಾರ್ ರೂಮ್ ನ ತುರ್ತು ಸೇವಾ ವಿಭಾಗದ ಪಿ ಜಿ ಜಗನಿವಾಸ ರಾವ್, ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಮತ್ತಿತರರು ಸಹಕರಿಸಿದರು.
ಆ್ಯಂಬುಲೆನ್ಸ್ ಚಾಲಕರಿಗೆ ಸೇವಾ ಭಾರತಿಯಿಂದ ಊಟದ ವ್ಯವಸ್ಥೆಯನ್ನೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಸೇವಾ ಭಾರತಿ ಪುತ್ತೂರು ಇದರ ವತಿಯಿಂದ ಮಾಡಲಾಯಿತು.