ಕರ್ಫ್ಯೂ ಉಲ್ಲಂಘನೆ : ದ.ಕ. ಜಿಲ್ಲೆಯಲ್ಲಿ 74 ವಾಹನಗಳ ಮುಟ್ಟುಗೋಲು
ದ.ಕ.ಜಿಲ್ಲೆಯಲ್ಲಿ ಕೋವಿಡ್-19 ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 74 ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಕರ್ಫ್ಯೂ ನಿರ್ಬಂಧ ಉಲ್ಲಂಘನೆ ಆರೋಪದಲ್ಲಿ 186 ಪ್ರಕರಣಗಳನ್ನು ನಗರ ಪೊಲೀಸರು ದಾಖಲಿಸಿದ್ದಾರೆ. ಅಲ್ಲದೆ ಅವಧಿ ಮೀರಿ ಸುತ್ತಾಡುತ್ತಿದ್ದ 28 ದ್ವಿಚಕ್ರ ವಾಹನಗಳನ್ನು ನಗರ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಉಳಿದಂತೆ ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ 4, ಮಾಸ್ಕ್ ಧರಿಸದ ಆರೋಪದ ಮೇಲೆ 154 ಕೇಸುಗಳು ದಾಖಲಾಗಿದೆ.
ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದು 7 ಪ್ರಕರಣ ದಾಖಲಿಸಿದ್ದಾರೆ. ಮಾಸ್ಕ್ ಧರಿಸದ್ದಕ್ಕೆ 1,311 ಪ್ರಕರಣ ಮತ್ತು ಅವಧಿ ಮೀರಿ ಸಂಚರಿಸಿದ 46 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.