Ad Widget

ಬೆಳ್ತಂಗಡಿ ಮೂಲದ ಮಂಗಳೂರಿನ ಉದ್ಯಮಿಯನ್ನು ತಲ್ವಾರ್ ಬೀಸಿ ಹತ್ಯೆ

ಮಂಗಳೂರು : ರಿಯಲ್ ಎಸ್ಟೇಟ್ ಹಾಗೂ ಪ್ಲೈವುಡ್ ವ್ಯಾಪಾರ ನಡೆಸುತ್ತಿದ್ದ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಹತ್ಯೆ ನಡೆಸಿ ಪರಾರಿಯಾಗಿದೆ.

ಸುದರ್ಶನ್ ಅಲಿಯಾಸ್ ಹರ್ಷ ರಾಣೆ ( 36) ಇದೀಗ ಕೊಲೆಗೀಡಾಗಿರುವ ಉದ್ಯಮಿ. ಮೂಲತಃ ಅವರು ಬೆಳ್ತಂಗಡಿಯ ತೊಟತ್ತಾಡಿಯ ಬೆಂದ್ರಾಲ ನಿವಾಸಿಯಾಗಿದ್ದು ಅವರಿಗೆ 3 ವರ್ಷದ ಮಗನಿದ್ದಾನೆ.

ಬೈಕ್​ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಹೊಂಚು ಹಾಕಿ ಕಾಯುತ್ತಿದ್ದ ಹಂತಕರು ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ‌ ಹೊಡೆದಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಹರ್ಷ ಮೇಲೆ ಇಬ್ಬರು ತಲ್ವಾರ್ ಬೀಸಿ ಕೊಲೆ ಮಾಡಿದ್ದಾರೆ.

ಮಂಗಳೂರು, ಶಿರಸಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯಮ ನಡೆಸುತ್ತಿದ್ದರು ಹಾಗೂ ಹಲವು ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.

ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

error: Content is protected !!
Scroll to Top
%d bloggers like this: