ಕೋವಾಕ್ಸಿನ್ ಲಸಿಕೆ ನೀಡುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಕರೆದೊಯ್ದರು | ಕಟ್ಟಿಹಾಕಿ ಅತ್ಯಾಚಾರಗೈದ ದುರುಳರು

ಕೊರೊನಾ ಲಸಿಕೆ ನೀಡುವುದಾಗಿ ನಂಬಿಸಿ ಹುಡುಗಿಯೊಬ್ಬಳನ್ನು ಕರೆದೊಯ್ದ ದುಷ್ಕರ್ಮಿಗಳು ಆಕೆಯನ್ನು ಹಗ್ಗದಿಂದ ಕಟ್ಟಿಹಾಕಿ ಅತ್ಯಾಚಾರ ಮಾಡಿರುವ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ನಡೆದಿದೆ.

 

ಆರೋಪಿಗಳನ್ನು ರಾಕಿ ಮತ್ತು ಮೊಂಟು ಎಂದು ಗುರುತಿಸಲಾಗಿದೆ.

ಕೋವಿಡ್​ ಹೆಚ್ಚಾಗಿರುವ ಪಟನಾದ ಆರೋಗ್ಯ ಕೇಂದ್ರದಲ್ಲಿ ಹುಡುಗಿಯನ್ನು ಭೇಟಿಯಾದ ಆರೋಪಿಗಳು ಲಸಿಕೆ ನೀಡುವುದಾಗಿ ನಂಬಿಸಿ ನಿರ್ಜನ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ.

ಕರವಸ್ತ್ರದಿಂದ ಬಾಯಿ ಮುಚ್ಚಿ, ತನ್ನ ಕೈ-ಕಾಲುಗಳನ್ನು ಕಟ್ಟಿಹಾಕಿ, ರೇಪ್ ಮಾಡಿದ್ದರು ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಅತ್ಯಾಚಾರಗೈದು ಆಕೆಯನ್ನು ಮನೆಗೆ ಬಿಟ್ಟು ಕಳುಹಿಸಿದ್ದಾರೆ. ಮನೆಗೆ ಬಂದು ಆಕೆ ನಡೆದ ಘಟನೆಯನ್ನು ಮನೆಯವರಿಗೆ ವಿವರಿಸಿದ್ದಾಳೆ.

ನಂತರ ಮನೆಯವರ ಜತೆ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ಸಹಾಯದಿಂದಲೇ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ.

Leave A Reply

Your email address will not be published.