ದ.ಕ ಜಿಲ್ಲೆಯಲ್ಲಿ ಇಂದು ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿನಕ್ಕೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಿತ್ಯವೂ ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇಂದು ಬರೋಬ್ಬರಿ 1175 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು 206 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಇಂದು ಜಿಲ್ಲೆಯಲ್ಲಿ ಕೊರೋನಾಗೆ ಓರ್ವರು ಬಲಿಯಾಗಿದ್ದಾರೆ. ಕೊರೋನಾಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 756 ಕ್ಕೆ ಏರಿಕೆಯಾಗಿದೆ.
ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 43,904 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 5,662 ಆಕ್ವೀವ್ ಕೇಸ್.
ಜಿಲ್ಲಾವಾರು ಕೋವಿಡ್ ವಿವರ :
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 302, ಬಳ್ಳಾರಿ 896, ಬೆಳಗಾವಿ 545, ಬೆಂಗಳೂರು ಗ್ರಾಮಾಂತರ 1,129, ಬೆಂಗಳೂರು ನಗರ 19,637, ಬೀದರ್ 180, ಚಾಮರಾಜನಗರ 359, ಚಿಕ್ಕಬಳ್ಳಾಪುರ 545, ಚಿಕ್ಕಮಗಳೂರು 242, ಚಿತ್ರದುರ್ಗ 126, ದಕ್ಷಿಣ ಕನ್ನಡ 1,175, ದಾವಣಗೆರೆ 196, ಧಾರವಾಡ 427, ಗದಗ 132, ಹಾಸನ 624, ಹಾವೇರಿ 111, ಕಲಬುರಗಿ 957, ಕೊಡಗು 537, ಕೋಲಾರ 536, ಕೊಪ್ಪಳ 220, ಮಂಡ್ಯ 939, ಮೈಸೂರು 1,219, ರಾಯಚೂರು 628, ರಾಮನಗರ 183, ಶಿವಮೊಗ್ಗ 372, ತುಮಕೂರು 1,195, ಉಡುಪಿ 568, ಉತ್ತರ ಕನ್ನಡ 377, ವಿಜಯಪುರ 408 ಮತ್ತು ಯಾದಗಿರಿಯಲ್ಲಿ 259 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.