ಕೋವಿಡ್ ಲಸಿಕೆ ಪಡೆದುಕೊಳ್ಳಲು ನೋಂದಾವಣಿ ಮಾಡಿಕೊಳ್ಳುವ ರೀತಿ ಹೇಗೆ? ಇಲ್ಲಿದೆ ಮಾಹಿತಿ
18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕುರಿತು ಸರಕಾರ ಘೋಷಣೆ ಮಾಡಿದ ಬಳಿಕ ಕೋವಿನ್ ಪ್ಲಾಟ್‌ಫಾರ್ಮ್ ಮತ್ತು ಆರೋಗ್ಯಾ ಸೇತು ಆ್ಯಪ್ ನಲ್ಲಿ ಇಂದು ನೋಂದಣಿಗೆ ಪ್ರಾರಂಭಗೊಂಡಿದೆ.
ಮೇ 1 ರಿಂದ ಎಲ್ಲಾ ವಯಸ್ಕರಿಗೆ ಕೋವಿಡ್ -19 ವ್ಯಾಕ್ಸಿನೇಷನ್, ಕೋವಿನ್ ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಪಡೆಯುವುದು ಮತ್ತು ಲಸಿಕೆ ಪಡೆಯಲು ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದು 18 ರಿಂದ 45 ವರ್ಷದೊಳಗಿನವರಿಗೆ ಕಡ್ಡಾಯವಾಗಿರುತ್ತದೆ.
ಕೋವಿನ್ ಮತ್ತು ಆರೋಗ್ಯಾ ಸೇತು ಹೇಗೆ ಕೆಲಸ ಮಾಡುತ್ತದೆ? ಕೋವಿನ್ ಪೋರ್ಟಲ್ ಮತ್ತು ಆರೋಗ್ಯಾ ಸೇತು ಪ್ಲಾಟ್‌ಫಾರ್ಮ್‌ಗಳು ಲಸಿಕೆಗಾಗಿ ಫಲಾನುಭವಿಗಳಿಗೆ ಕನಿಷ್ಠ ನಾಲ್ಕು ಕುಟುಂಬ ಸದಸ್ಯರನ್ನು (ಬಳಕೆದಾರರನ್ನು ಒಳಗೊಂಡಂತೆ) ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಲಭ್ಯತೆಗೆ ಅನುಗುಣವಾಗಿ ಹತ್ತಿರದ ಲಸಿಕೆ ಕೇಂದ್ರವನ್ನು ಹುಡುಕಲು ಮತ್ತು ಸಮಯವನ್ನು ಕಾಯ್ದಿರಿಸಲು ಇದು ಬಳಕೆದಾರರಿಗೆ ಅವಕಾಶ ಮಾಡಿಕೊಡಲಿದೆ.
ಹೇಗೆ ಮಾಡಬೇಕು?
1)cowin.gov.inಗೆ ಲಾಗ್‌ಇನ್ ಆಗಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
2)ಮೊಬೈಲ್‌ಗೆ ಬರುವ ಒನ್ ಟೈಮ್ ಪಾಸ್‌ವರ್ಡ್ ನಮೂದಿಸಿ.
3)ನಂತರ ವೆರಿಫೈ ಬಟನ್ ಒತ್ತಿ.
4)ಲಸಿಕೆ ನೋಂದಣಿ ಎಂಬ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಫೋಟೋ ಇರುವ ಗುರುತಿನ ಚೀಟಿ (4 ಆಯ್ಕೆಗಳು)ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.
5)ನಿಮ್ಮ ಹೆಸರು, ವಿಳಾಸ ಲಿಂಗ, ವಾಸಸ್ಥಳ ನಮೂದಿಸಿ.
6)ಬಳಿಕ ರಿಜಿಸ್ಟರ್ ಎಂಬ ಬಟನ್ ಒತ್ತಿ. ಆಗ ಯಶಸ್ವಿ ನೋಂದಣಿ ಬಗ್ಗೆ ಸಂದೇಶ ಬರುತ್ತದೆ ಮತ್ತು ಅಕೌಂಟ್ ಡಿಟೇಲ್ಸ್ ಎಂಬ ಪುಟ ಓಪನ್ ಆಗುತ್ತದೆ.
7)ಇಲ್ಲಿ ನೀವು ಲಸಿಕೆ ಪಡೆಯುವ ದಿನಾಂಕ, ಇಷ್ಟಾದ ಬಳಿಕ ನಿಮ್ಮ ವ್ಯಾಪ್ತಿಯಲ್ಲಿ ಇರುವ ಲಸಿಕಾ ಕೇಂದ್ರ/ಆಸ್ಪತ್ರೆಗಳ ವಿವರ ಸ್ಕ್ರೀನ್ ಮೇಲೆ ಮೂಡುತ್ತದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಬಹುದು.
8)ಒಂದೇ ಮೊಬೈಲ್ ಸಂಖ್ಯೆಯಿಂದ ಒಟ್ಟು ಐವರ ಹೆಸರು ಮಾತ್ರ ನೋಂದಾಯಿಸಬಹುದು.