ಒಂದೇ ಅಂಬುಲೆನ್ಸ್ ನಲ್ಲಿ ಒಂದರ ಮೇಲೊಂದು ಶವ ಬಿಸಾಕಿ 22 ಹೆಣಗಳ ಸಾಗಾಟ
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಕೊರೋನಾದಿಂದ ಮೃತಪಟ್ಟ 22 ಮಂದಿಯ ಮೃತದೇಹಗಳನ್ನು ಒಂದೇ ಆ್ಯಂಬುಲೆನ್ಸ್ ನಲ್ಲಿ ಮೂಟೆಗಳಂತೆ ಒಟ್ಟಿಗೆ ಒಟ್ಟಿ ಚಿತಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾಮಾನ್ಯವಾಗಿ ಒಂದು ಆ್ಯಂಬುಲೆನ್ಸ್ ನಲ್ಲಿ ಒಂದು ಪಾರ್ಥಿವ ಶರೀರವನ್ನು ಮಾತ್ರ ಸಾಗಿಸಲಾಗುತ್ತದೆ. ಅಗತ್ಯಬಿದ್ದರೆ 23 ಅಕ್ಕಪಕ್ಕ ಇಟ್ಟುಕೊಂಡು ಹೋಗುವುದು ಸಹಜ. ಹೀಗಿರುವಾಗ 22 ಮೃತದೇಹಗಳನ್ನು ಒಮ್ಮೆಗೆ ಆ್ಯಂಬುಲೆನ್ಸ್ ನ ಒಳಗೆ ಒಂದರ ಮೇಲೆ ಒಂದು ಬಿಸಾಕಿ ಸಾಗಿಸಿರುವುದು ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಔರಂಗಬಾದ್ ನಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತರ ಸಂಬಂಧಿಕರು ಇದರ ವಿಡಿಯೋ ಮಾಡದಂತೆ ಅವರ ಎಲ್ಲರ ಮೊಬೈಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಸಹಾ ಆರೋಪ ಕೇಳಿಬಂದಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ.
ಕೋವಿಡ್ ನಿಂದ ಮೃತಪಟ್ಟವರನ್ನು ತೀರಾ ನಿಕೃಷ್ಟವಾಗಿ ಬಿಂಬಿಸಬೇಡಿ. ಶವ, ಹೆಣ ಇತ್ಯಾದಿ