Ad Widget

ಅಂಬುಲೆನ್ಸ್ ಬರಲಿಲ್ಲ ; ಬೈಕ್ ನಲ್ಲೇ ಶವವನ್ನು ಮಧ್ಯೆ ಕೂರಿಸಿಕೊಂಡು ಶವಾಗಾರಕ್ಕೆ ಸಾಗಿದ ಭೀಕರ ಘಟನೆ !

ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರೂ ಎಂದೂ ಉಳಿಸಿಕೊಳ್ಳಲಾಗದ0ತಹ ಸನ್ನಿವೇಶಗಳೆಲ್ಲ ದಿನವೂ ಒಂದಲ್ಲ ಒಂದು ನಡೆಯುತ್ತಿದೆ.

ಇಲ್ಲೊಂದು ಕುಟುಂಬವು ಆಂಬುಲೆನ್ಸ್ ಸೌಲಭ್ಯ ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ಬೈಕ್ ಮೇಲೆ ಹಾಕಿಕೊಂಡು ಹೋಗಿ ಶವಸಂಸ್ಕಾರ ಮಾಡಿರುವಂತಹ ಮನಕಲುಕುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.
ಮೃತ ಮಹಿಳೆ ಆಂಧ್ರ ಪ್ರದೇಶದ ಶ್ರೀಕಾಕುಳಂನ  ಮಂದಾಸಾ ಮಂಡಲದಲ್ಲಿರುವ ಗ್ರಾಮದವಳು ಎನ್ನಲಾಗಿದೆ.

50 ವರ್ಷ ವಯಸ್ಸಿನ ಈ ಮಹಿಳೆಯು ಕೊರೋನಾ ಪೀಡಿತರಾಗಿದ್ದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತುು. ಆದರೆ ಚಿಕಿತ್ಸೆ ಪ್ರಾರಂಭಿಸುವ ಮೊದಲೇ ಆಕೆ ಮೃತಪಟ್ಟಿದ್ದಳು.

ಆಂಬುಲೆನ್ಸ್ ಈಗ ಬರುತ್ತೆ ಅಂತ ಕುಟುಂಬವರ್ಗ ಶವವನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ಕಾದದ್ದೇ ಬಂತು. ಆದರೆ ಅಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ ಯಾವುದೇ ಆಂಬುಲೆನ್ಸ್ ಸಿಗದಿದ್ದಾಗ ಬೈಕ್ ಮೇಲೆಯೇ ಹೆಣವನ್ನು ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸೋಂಕಿತ ವ್ಯಕ್ತಿಯಿಂದ ತಮಗೂ ಕೋರೋನಾ ಹರಡಬಹುದು ಎಂಬ ಭಯ ಇದ್ದರೂ ಹೆದರಿಕೊಳ್ಳದೆ ಕುಟುಂಬದ ಇಬ್ಬರು ಸದಸ್ಯರುಗಳು ತಮ್ಮ ಮಧ್ಯೆ ಶವವನ್ನು ಇಟ್ಟುಕೊಂಡು ದ್ವಿಚಕ್ರವಾಹನದಲ್ಲಿ ಸಾಗಿ ಶವ ಸಂಸ್ಕಾರ ನೆರವೇರಿಸಿದ್ದಾರೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: