ವಧು ಕೋವಿಡ್ ಪಾಸಿಟೀವ್ , ಮುಂದಕ್ಕೆ ಹೋದ ಫಸ್ಟ್ ನೈಟ್ !
ಮದುವೆಯಾದ ದಿನವೇ ವಧು ಹೋಮ್ ಕ್ವಾರಂಟೈನ್ ಆಗಿದ್ದಾಳೆ. ಆದರೆ ವಧುವಿನ ಸ್ವಂತ ಊರು ಕೊಡಗಿನ ವರದಿಯಲ್ಲಿ ಪಾಸಿಟಿವ್ ಬಂದ್ರೆ, ಪತಿಯ ಊರಿನಲ್ಲಿ ನೆಗೆಟಿವ್ ಬಂದಿದೆ. ಮದುವೆ ಆಗಿ ಫಸ್ಟ್ ನೈಟ್ ನ ನಿರೀಕ್ಷೆಯಲ್ಲಿದ್ದ ಜೋಡಿಗೆ ನಿರಾಸೆ ಆಗಿದೆ. ಇಬ್ಬರೂ ಬೇರೆ ಬೇರೆ ರೂಮಿನಲ್ಲಿ ಮಲಗುವಂತಾಗಿದೆ !!
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ನಿವಾಸಿ ರಾಜನ್ ಪುತ್ರಿ ಸಿಮ್ನಾ ಮದುವೆ ಕೇರಳದ ಕಣ್ಣೂರಿನ ಯುವಕನ ಜೊತೆ ಏಪ್ರಿಲ್ 25ರಂದು ನಿಗದಿಯಾಗಿತ್ತು. ಕೊರೊನಾ ಮಾರ್ಗಸೂಚಿ ಹಿನ್ನೆಲೆ ವಧು-ವರ ಏಪ್ರಿಲ್ 23ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಎರಡು ದಿನವಾದ್ರೂ ವರದಿ ಬಾರದಿದ್ದಾಗ ಏನು ಆಗದೆಂಬ ನಂಬಿಕೆಯಲ್ಲಿ ಕುಟುಂಬಸ್ಥರು ಮದುವೆ ಮಾಡಿದ್ದರು.
ಮದುವೆಯಾಗಿ ಪತಿ ಮನೆ ಸೇರುತ್ತಿದ್ದಂತೆ ಮೊಬೈಲ್ ಗೆ ಕೊರೊನಾ ಪಾಸಿಟಿವ್ ಇರೋದರ ಮೆಸೇಜ್ ಬಂದಿದೆ. ಹೀಗಾಗಿ ವರನ ಕುಟುಂಬಸ್ಥರು ವಧುವನ್ನ ಪ್ರತ್ಯೇಕ ಕೋಣೆಯಲ್ಲಿರಿಸಿದ್ದರು. ಕೇರಳದಲ್ಲಿ ವಧುವನ್ನ ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ.
ಕೇರಳದಲ್ಲಿ ವರದಿ ನೆಗಟಿವ್ ಬಂದಾಗ ರಾಜನ್ ಕುಟುಂಬಸ್ಥರು ಮಡಿಕೇರಿಯ ಸ್ಥಳೀಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ನಮ್ಮಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಕೇರಳದಲ್ಲಿ ಯಾವ ಪರೀಕ್ಷೆ ಮಾಡಿದ್ದಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ನಾವು ತಪ್ಪು ರಿಪೋರ್ಟ್ ನೀಡಿದ್ದೇವೆ ಅಂತ ಹೇಳೋದು ಸರಿಯಲ್ಲ. ಅಲ್ಲಿ ಕೊಟ್ಟ ರಿಪೋರ್ಟ್ ಈ ಸರಿ ಇಲ್ಲದೆ ಇರಬಹುದು. ಯಾವುದನ್ನು ಇಲ್ಲಿಂದ ನಾವು ನಿರ್ಧರಿಸಲು ಆಗುವುದಿಲ್ಲ. ಕೆಲವರಿಗೆ ಲಕ್ಷಣಗಳು ಇರತ್ತೆ, ಕೆಲವರಿಗೆ ಇರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದು ಸಲ ಪರೀಕ್ಷೆ ನಡೆಸಿ ಆಗ ತಿಳಿಯುತ್ತದೆ ಎಂದೂ ಹೇಳಿದ್ದಾರೆ.