ಹೊರ ರಾಜ್ಯಗಳಿಂದ ಬರುವವರಿಗೆ ಸ್ಥಳೀಯ ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ – ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ರಾಜ್ಯ ಸರಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಹೊರ ಜಿಲ್ಲೆ, ಬೆಂಗಳೂರು ಹಾಗೂ ರಾಜ್ಯದ ಇತರ ಕಡೆಗಳಿಂದ ಬೆಳ್ತಂಗಡಿ ತಾಲೂಕಿಗೆ ಬರುವವರು ಸ್ವ ಇಚ್ಚೆಯಿಂದ ಕ್ವಾರಂಟೈನ್‌ಲ್ಲಿ ಇರಲು ಶಾಸಕ ಹರೀಶ್ ಪೂಂಜಾ ಅವರು ವಿನಂತಿಸಿದ್ದಾರೆ.

ಹಾಗೆ ಪರವುರ್ ಇಂದ ಬರುವವರು ದಿನಗಳ ಕಾಲ ತಮ್ಮ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿದ್ದು ಕೊರೋನಾ ಮುಕ್ತ ತಾಲೂಕಿಗೆ ಸಹಕರಿಸುವಂತೆ ಶಾಸಕ ಹರೀಶ್ ಪೂಂಜ ವಿನಂತಿಸಿದ್ದಾರೆ.

200ಬೆಡ್‌ನ ಲಾಯಿಲ ಟಿ. ಬಿ ಆಸ್ಪತ್ರೆ ಯನ್ನು ಕೊರೋನಾ ಪಾಸಿಟೀವ್ ಬಂದವರಿಗೆ ಈಗಾಗಲೇ ಉಪಯೋಗಿಸುತ್ತಿದ್ದು ಆರೋಗ್ಯ ಇಲಾಖೆಯಿಂದ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕರು ಹೇಳಿದರು.

ಹಾಗೆ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದವರು ತಮಗೆ ಬೇಕಾದ ಊಟ ಹಾಗೂ ಇತರ ವ್ಯವಸ್ಥೆಯನ್ನು ಮನೆಯಿಂದಲೇ ತರಿಸಬಹುದು. ಐದು ದಿನಗಳ ಬಳಿಕ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಮನೆಗೆ ಹೋಗಬಹುದಾಗಿದೆ. ಇದು ಸರಕಾರದ ವ್ಯವಸ್ಥೆಯಲ್ಲ, ನಮ್ಮ ಊರಿನ ಸುರಕ್ಷತಾ ಹಿನ್ನಲೆಯಲ್ಲಿ ನಾವು ಮಾಡಿದ ವ್ಯವಸ್ಥೆ ಎಂದು ಅವರು ತಿಳಿಸಿದರು.

ಕೊರೋನಾ ಮುಂಜಾಗೃತಾ ಕ್ರಮವಾಗಿ ತಾಲೂಕಿನಲ್ಲಿ ಶೀಘ್ವಾಗಿ ಕಾಲ್ ಸೆಂಟರ್ ತೆರೆಯಲಾಗುವುದು . ಇದರಿಂದ ಜನರಿಗೆ ಯಾವುದಾದರೂ ಸಮಸ್ಯೆಗಳು ಎದುರಾದಾಗ ಸಂಪರ್ಕಿಸಲು ಅನುಕೂಲವಾಗಲಿದೆ ಎಂದವರು ಹೇಳಿದರು.

Leave A Reply

Your email address will not be published.