Big Breaking || ರಾಜ್ಯದಲ್ಲಿ TOTAL LOCK DOWN | ಕರ್ನಾಟಕ ರಾಜ್ಯಕ್ಕೆ ಬಿದ್ದಿದೆ ದೊಡ್ಡ ಬೀಗ !!

ಇದೀಗ ಕರ್ನಾಟಕ ಸರ್ಕಾರದ ಲಾಕ್ ಡೌನ್ ಸಂಬಂಧಿತ ನಿರ್ಧಾರ ತೆಗೆದುಕೊಳ್ಳಲು ಮಹತ್ವದ ಸಭೆ ನಡೆದಿದ್ದು ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದೀಗ ಕರ್ನಾಟಕಕ್ಕೆ ದೊಡ್ಡ ಬೀಗ ಬಿದ್ದಿದ್ದು, ಇನ್ನು ಹದಿನಾಲ್ಕು ದಿನ ಒಟ್ಟು ಕರ್ನಾಟಕ ಸ್ತಬ್ಧವಾಗಲಿದೆ.

ಇಂದು ಬೆಳಿಗ್ಗೆ 11:00 ಗಂಟೆಗೆ ಸಂಪುಟ ಸಭೆ ನಡೆದಿದ್ದು ಸುದೀರ್ಘ 2.5 ಗಂಟೆಗೂ ಅಧಿಕ ಸಮಯ ಸಮಾಲೋಚನೆ ಬಳಿಕ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

1) ಕರ್ನಾಟಕದಲ್ಲಿ ಟೋಟಲ್ ಲಾಕ್ ಡೌನ್
2) ಮಾರ್ಗಸೂಚಿ ಶೀಘ್ರದಲ್ಲಿ ಪ್ರಕಟವಾಗಲಿದೆ
3) ನಾಳೆೆರಾಾತ್ರಿ 9:00 ಗಂಟೆಯಿಂದ ಇಡೀೀ ರಾಜ್ಯ ಲಾಾಕ್್

4) ಮೇ 10, ಬೆಳಿಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಮುಂದುವರೆಯಲಿದೆ

5) ಸಾರಿಗೆ ಇರಲ್ಲ. ಕೆಎಸ್ಸಾರ್ಟಿಸಿ ಬಿಎಂಟಿಸಿ ಮೆಟ್ರೋ ಬಂದ್.

6) ಗಾರ್ಮೆಂಟ್ಸ್ ಬಂದ್

ಯಾವುದಕ್ಕೆ ಎಲ್ಲಾ ವಿನಾಯಿತಿ ?

  1. ಹಾಲು ಹಣ್ಣು ತರಕಾರಿ ದಿನಸಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10:00 ಯವರೆಗೆ ಅನುಮತಿ ( 4 ಗಂಟೆಗಳ ಕಾಲ ಅವಕಾಶ)
  2. ಮದ್ಯ ಮಾರಾಟ ಇರುತ್ತೆ. ಮದ್ಯ ಖರೀದಿಗೂ ಸಮಯ ನಿಗದಿಿ. ಪಾರ್ಸೆಲ್ ಗೆ ಮಾತ್ರ ಅವಕಾಶ. ಮದ್ಯದಂಗಡಿಗಳು ಬಂದ್ ಆಗುತ್ತದೆ ಎಂದು ಮಧ್ಯ ಶೇಖರಿಸಿ ಇಡುವ ಅವಶ್ಯಕತೆ ಇಲ್ಲ!
  3. ಆಸ್ಪತ್ರೆಗಳು, ಮೆಡಿಕಲ್ ಲಭ್ಯ
  4. ತುರ್ತು ಸಾರಿಗೆ ವ್ಯವಸ್ಥೆ, ಅಗ್ನಿಶಾಮಕ, ಪೊಲೀಸ್, ವಾಟರ್ ಸಪ್ಲೈ,
  5. ಕಟ್ಟಡ ಕಾರ್ಮಿಕ ನಿರ್ಮಾಣಕ್ಕೆ ಅನುಮತಿ
  6. ಕೈಗಾರಿಕೆಗಳು ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ
  7. ರೆಸ್ಟೋರೆಂಟ್ ಬೆಳಿಗ್ಗೆ ಮಾತ್ರ. ಪಾರ್ಸೆಲ್ ಗೆ ಮಾತ್ರ ಅವಕಾಶ
  8. ಕೃಷಿ ಚಟುವಟಿಕೆ ಅಬಾಧಿತ
  9. ಎಲೆಕ್ಟ್ರಿಕಲ್ ಹಾರ್ಡ್ ವೇರ್ ಗೆ ಭಾಗಶಃ ಅನುಮತಿ

ಸರಿಯಾಗಿ ಹನ್ನೊಂದು ಗಂಟೆಗೆ ಶುರುವಾದ ಸಚಿವ ಸಂಪುಟ ಸಭೆಯಲ್ಲಿ ಮೊದಲಿಗೆ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲಾಯಿತು. ಮೊದಲಿಗೆ ಆರೋಗ್ಯ ಸಚಿವ ಸುಧಾಕರ್ ಅವರು ಮಾತನಾಡಿ ಬೆಂಗಳೂರಿನ ಒಟ್ಟಾರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಬೆಂಗಳೂರನ್ನು ನಿಯಂತ್ರಿಸಿದರೆ ಉಳಿದ ಹಳ್ಳಿಗಳನ್ನು ನಿಯಂತ್ರಿಸಿದಂತೆ ಎಂದಿದ್ದಾರೆ. ಬೆಂಗಳೂರಿನಲ್ಲಿ ದಿನವೊಂದಕ್ಕೆ 20,000 ಕೇಸುಗಳು ಬರುತ್ತಿರುವುದು ಆತಂಕಕಾರಿಯಾಗಿದೆ. ಆದುದರಿಂದ ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಮೆಡಿಕಲ್ ಸಿಸ್ಟಮ್ ಸಂಪೂರ್ಣ ಆಗುವ ಹಂತದಲ್ಲಿದೆ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳು ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ವಾರ 4 ಡೌನ್ಲೋಡ್ ಮಾಡುವ ಕಾರಣದಿಂದ ಒಂದಷ್ಟು ಬ್ರೀತಿಂಗ್ ಟೈಮ್ ಆರೋಗ್ಯ ಇಲಾಖೆಗೆ ಸಿಗಲಿದೆ. ಇದು ಆರೋಗ್ಯ ಸಚಿವ ಸುಧಾಕರ್ ಅವರ ಅಭಿಪ್ರಾಯವಾಗಿತ್ತು.

ಅದಲ್ಲದೇ ತಜ್ಞರು ಕೂಡ ಮಾಡಲೇ ಬೇಕೆಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರು ಲಾಕ್ಡೌನ್ ಮಾಡುವ ಬಗ್ಗೆ ಬಹುತೇಕ ಸಚಿವರು ಸಮ್ಮತಿ ಮತ್ತು ಒತ್ತಾಯ ಮಾಡಿದ್ದಾರೆ.

ಆನಂತರ ವಲಯವಾರು ಚರ್ಚೆ ನಡೆದಿದ್ದು ಎಲ್ಲ ಮಂತ್ರಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ವಿವರಿಸಿದ್ದಾರೆ. ಕೊನೆಗೆ ಮುಖ್ಯಮಂತ್ರಿಗಳು ಎಲ್ಲಾ ಸಾಧಕ-ಬಾಧಕ ವನ್ನು ಅಳೆದು ತೂಗಿ ನೋಡಿ ಕರ್ನಾಟಕಕ್ಕೆ ದೊಡ್ಡ ಬೀಗ ಜಡಿದಿದ್ದಾರೆ.

ಅಷ್ಟೇ ಅಲ್ಲದೆ ಒಂದು ವೇಳೆ 14 ದಿನಗಳಲ್ಲಿ ಜನರು ಸಹಕರಿಸದೆ ಕೋರೋನಾ ನಿಯಂತ್ರಣಕ್ಕೆ ಬಾರದೆ ಹೋದರೆ ಮತ್ತಷ್ಟು ದಿನ ಲಾಕ್ಡೌನ್ ಮುಂದುವರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.