ನಿನ್ನೆ ಆಡು ಹಿಡಿಯಲು ಬಂದ ಚಿರತೆ ಮತ್ತೆ ವಾಪಸ್ | ರಾತ್ರಿ ಮರದ ಮೇಲೆ ಕುಳಿತಿದ್ದ ಕೋಳಿ ಕದ್ದು ಪರಾರಿ
ಕಡಬ ತಾಲೂಕಿನ ಮರ್ದಾಳದ ಐತ್ತೂರು ಗ್ರಾಮದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಚಿರತೆ ದಾಳಿಮಾಡಿ ಪರಾರಿಯಾದ ಚಿರತೆ ಮತ್ತೆ ರಾತ್ರಿ ಪ್ರತ್ಯಕ್ಷವಾಗಿದೆ.
ನಿನ್ನೆ ಅದೇ ಮನೆಯವರ ಮನೆಯಂಗಳದವರೆಗೆ ಬಂದು ಮರದಲ್ಲಿ ಕುಳಿತ್ತಿದ್ದ ಕೋಳಿಯನ್ನು ಹೊತ್ತೊಯ್ದಿದೆ.
ನಿನ್ನೆ ರಾತ್ರಿ 10 ರ ಸುಮಾರಿಗೆ ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರ ಮನೆ ಅಂಗಳಕ್ಕೆ ಚಿರತೆ ಬಂದಿತ್ತು. ಸುತ್ತಮುತ್ತ ಹುಡುಕಾಡಿ ಏನೂ ಸಿಗದ ಚಿರತೆ ವಾಪಸ್ ಹೋಗಿತ್ತು. ಆಮೇಲೆ ಮತ್ತೆ ಬಂದು ಮರದ ಮೇಲೆ ಕೂತಿದ್ದ ಕೋಳಿಗೆ ಕಣ್ಣು ಹಾಕಿತ್ತು. ಅಲ್ಲಿ ಮರದ ಮೇಲೆ ಕುಳಿತ್ತಿದ್ದ ಕೋಳಿಯನ್ನು ಕಚ್ಚಿಕೊಂಡು ಎಸ್ಕೇಪ್ ಆಗಿದೆ.
ಮನೆಯಂಗಳಕ್ಕೆ ಚಿರತೆ ಎಂಟ್ರಿ ಕೊಟ್ಟ ಕಾರಣದಿಂದ ಮನೆ ಮಂದಿ ಮತ್ತು ಸ್ಥಳೀಯಲ್ಲಿ ಭಯ ಕಾಡತೊಡಗಿದೆ. ಚಿರತೆಗೆ ಆಹಾರದ ತೀವ್ರ ಅಭಾವ ಆಗಿದೆ ಎನ್ನಲಾಗುತ್ತಿದೆ. ವಿಷಯ ಅರಣ್ಯ ಇಲಾಖೆಗೆ ತಲುಪಿದ್ದು, ಚಿರತೆ ಕಾರ್ಯಾಚರಣೆಗೆ ತಯಾರಿ ನಡೆದಿದೆ ಎನ್ನಲಾಗಿದೆ.
ನಿನ್ನೆಯ ಆಡು ಹಿಡಿಯಲು ಬಂದ ಘಟನೆ
ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ಮೇಯಲು ಪಕ್ಕದಲ್ಲಿರುವ ಅಡ್ಕದಲ್ಲಿ ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ವಾಪಾಸು ಮನೆಗೆ ಕರೆತರಲು ರಾಘವ ಅವರ ಮಗ ಧನಂಜಯ ಅಲ್ಲಿಗೆ ತೆರಳುವಾಗ ಈ ಘಟನೆ ಸಂಭವಿಸಿತ್ತು.
ಸಂಜೆ ಸುಮಾರು 5:30 ರ ಸಮಯಕ್ಕೆ ಪೊದೆಯಂಚಿನಿಂದ ಧುಮುಕಿ ಬಂದ ಚಿರತೆಯು ಇದ್ದುದರಲ್ಲಿ ದೊಡ್ಡ ಆಡಿನ ಮೇಲೆ ದಾಳಿಮಾಡಿದೆ. ಆಗ ಪದ್ಮನಾಭ ಅವರು ಜೋರಾಗಿ ಕೂಗಿಕೊಂಡಿದ್ದರು. ಆಗ ಚಿರತೆ ಗಾಬರಿಯಿಂದ ಓಡಿ ಹೋಗಿದೆ.
ಪಕ್ಕದಲ್ಲಿ ಇರುವ ರಬ್ಬರ್ ನಿಗಮದ ರಬ್ಬರ್ ತೋಟ ವಿಶಾಲವಾಗಿದ್ದು ಅಲ್ಲಿನ ಪೊದೆಗಳ ಒಳಗೆ ಚಿರತೆ ಅಡಗಿರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತ ಪಡಿಸಿದ್ದರು.