ಆಸ್ಪತ್ರೆಯಲ್ಲಿದ್ದ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕದ್ದು ಬಾಯ್ ಫ್ರೆಂಡ್ ಗೆ ನೀಡುತ್ತಿದ್ದ ನರ್ಸ್! | ಬಾಯ್ ಫ್ರೆಂಡ್ ನ ಬಂಧನ, ನರ್ಸ್ ಪರಾರಿ
ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಅಕ್ರಮ ಮಾರಾಟ ಮಾಡಿದ ಆರೋಪದಡಿ ಭೋಪಾಲ್ ಪೊಲೀಸರು ಖಾಸಗಿ ಆಸ್ಪತ್ರೆಯ ಶುಶ್ರೂಷಕ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಶಾಲಿನಿ ವರ್ಮಾ, ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕದ್ದು ಗೆಳೆಯನಿಗೆ ನೀಡಿದ್ದಾಳೆ. ರೆಮ್ಡೆಸಿವಿರ್ ಜೊತೆಗೆ ಸಾಮಾನ್ಯ ಲವಣಯುಕ್ತ ಪದಾರ್ಥಗಳನ್ನು ತುಂಬಿಸಿ ನರ್ಸ್ ಗೆಳೆಯನಿಗೆ ಕೊಡುತ್ತಿದ್ದಳು. ನಂತರ ಅದನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತೆ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ.
ನಾನು ಮತ್ತು ಗೆಳತಿ ಈ ಹಿಂದೆ ರೆಮ್ಡೆಸಿವಿರ್ ಅನ್ನು 30,000 ರೂ.ಗೆ ಮಾರಾಟ ಮಾಡುತ್ತಿದ್ದೆವು. ಮತ್ತು ಇತ್ತೀಚೆಗೆ ವೈದ್ಯರಿಗೆ 13,000 ರೂ.ಗೆ ಮಾರಾಟ ಮಾಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ಬಾಯ್ ಫ್ರೆಂಡ್ ಬಂಧನವಾಗಿದ್ದು, ಆತನ ಗೆಳತಿ ನರ್ಸ್ ಶಾಲಿನಿ ವರ್ಮಾ ಪರಾರಿಯಾಗಿದ್ದಾರೆ.