ದ.ಕ. ಜಿಲ್ಲೆಯಲ್ಲಿ ಶನಿವಾರದಂದು ಕೊರೋನಾ ಮಹಾಸ್ಫೋಟ | ದಾಖಲೆಯ ಸೋಂಕು ಪತ್ತೆ
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ದಾಖಲೆಯ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಶನಿವಾರ ಒಂದೇ ದಿನ 517 ಮಂದಿಗೆ ಕೋವಿಡ್ ದೃಢಪಡುವ ಜತೆಗೆ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಜನತೆಯ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದು, ಸಂಭಾವ್ಯ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಬೇಕಾದ ಎಚ್ಚರಿಕೆ ನೀಡಿದೆ.ಶನಿವಾರ 128 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 40720 ಕ್ಕೆ ಏರಿಕೆಯಾಗಿದೆ. ಈ ಪೈಕಿ 3577 ಕ್ರಿಯ ಪ್ರಕರಣಗಳು. 36396 ಮಂದಿ ಗುಣಮುಖರಾಗಿದ್ದಾರೆ. 747 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಏನು ಕತೆ?
ರಾಜ್ಯದಲ್ಲಿ ಶನಿವಾರ ಬರೋಬ್ಬರಿ 29,438 ಮಂದಿಗೆ ಕೊರೊನಾ ದೃಢಪಟ್ಟಿದ್ದು, 208 ಮಂದಿಯನ್ನು ಬಲಿ ಪಡೆದಿದೆ. ಈವರೆಗೆ ರಾಜ್ಯದ ಸೋಂಕಿತರ ಪೈಕಿ 10,55,612 ಜನರು ಗುಣಮುಖ ರಾಗಿ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ ಒಟ್ಟು 2,34,483 ಸಕ್ರೀಯ ಪ್ರಕರಣಗಳಿದೆ.