ವೀಕೆಂಡ್ ಲಾಕ್ ಡೌನ್ ಇದ್ದರೂ ಲಾಕ್ಡೌನ್ನಲ್ಲಿ ಬಸ್ ರೈಲು ಇರುತ್ತದೆ
ವೀಕೆಂಡ್ ಲಾಕ್ಡೌನ್ ಘೋಷಣೆ ಆದರೂ ರಾಜ್ಯದಲ್ಲಿ ಆದರೆ ಬಿಎಂಟಿಸಿ ಸಂಚಾರ ಮಾತ್ರ ನಾಳೆ ಎಂದಿನಂತೆ ಇರಲಿದೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರವು ನೈಟ್ ಕಫ್ರ್ಯೂ ಮತ್ತು ವೀಕೆಂಡ್ ಲಾಕ್ಡೌನ್ ಜಾರಿದೆ ಮಾಡಿದೆ. 2 ದಿನ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿದೆ. 2 ದಿನ ಜನ ಮನೆಬಿಟ್ಟು ಹೊರಬರುವಂತಿಲ್ಲ. ಅಗತ್ಯ ಸೇವೆ ಬಿಟ್ಟು ಯಾರೂ ಕೂಡಾ ಹೊರಗೆ ಓಡಾಡುವಂತಿಲ್ಲ. ವೀಕೆಂಡ್ ಕರ್ಫ್ಯೂ ಜನಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಬಿಎಂಟಿಸಿ ಬಸ್ಗಳು ಮಾತ್ರ ಎಂದಿನಂತೆ ಸಂಚರಿಸಲಿವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಶನಿವಾರ ಮತ್ತು ಭಾನುವಾರ ಟಫ್ರೂಲ್ಸ್ ಜಾರಿಯಾಗಿರಲಿದೆ. ಜನರು ಹೊರಗಡೆ ಓಡಾಡುವಂತಿಲ್ಲ ಆದರೆ. ಬಸ್ ಮಾತ್ರ ಎಂದಿನಂತೆ ಓಡಾಡಲಿದೆ. ತುರ್ತು ಪರಿಸ್ಥಿತಿ ಇದ್ದವರು ತೆರಳಲು ಅವಕಾಶ ಮಾಡಿಕೊಡುತ್ತಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಸಂಚಾರ ಎಂದಿನಂತೆ ಇರಲಿದೆ.
ದೂರಪ್ರಯಾಣದ ಬಸ್ಗಳಿಗೆ ರೈಲುಗಳಿಗೆ ಅವಕಾಶ ಇದೆ. ಆದರೆ ನಿಲ್ದಾಣಗಳಿಗೆ ಹೋಗುವಾಗ ತಪಾಸಣೆ ವೇಳೆ ಟಿಕೆಟ್ ತೋರಿಸಬೇಕು. ದೂರಪ್ರಯಾಣ, ತುರ್ತು ಪ್ರಯಾಣಕ್ಕೆ ಕಾರಣ ಕೊಡಬೇಕಾಗುತ್ತದೆ.