ಫೇಸ್‌ಬುಕ್ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಸರಕಾರಿ ಉದ್ಯೋಗ ಕೊಡಿಸುವ ನಂಬಿಕೆ | ಹಲವರಿಂದ ಹಣ,ಲ್ಯಾಪ್‌ಟಾಪ್ ಪಡೆದು ವಂಚನೆ

Share the Article

ಫೇಸ್‌ಬುಕ್ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ, ಸರಕಾರಿ ಉದ್ಯೋಗ ನೀಡುವುದಾಗಿ ನಂಬಿಸಿ, ಹಣ ಮತ್ತು ಲ್ಯಾಪ್‌ಟಾಪ್‌ಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಉಡುಪಿಯ ಸೆನ್ ಪೊಲೀಸರು ಬಂಧಿಸಿದ್ದಾರೆ.

ಕಾಪು ಉಳಿಯಾರಗೋಳಿಯ ನಿಶಾಂತ್ ಎಸ್.ಕುಮಾರ್ ಯಾನೆ ನಿತಿನ್ (21) ಬಂಧಿತ ಆರೋಪಿ.

ಬಂಧಿತ ನಿತಿನ್‌ನಿಂದ ಮೋಸ ಮಾಡಲು ಬಳಕೆ ಮಾಡಿದ್ದ 7 ಲ್ಯಾಪ್ ಟಾಪ್ ಹಾಗೂ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಇವುಗಳ ಮೌಲ್ಯ 1,50,000ರೂ. ಎಂದು ಅಂದಾಜಿಸಲಾಗಿದೆ.

ಉಡುಪಿ ಎಸ್ಪಿ ವಿಷ್ಣುವರ್ಧನ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಎಸ್ಸೈ ಕೇಶವ ಗೌಡ, ಸಿಬ್ಬಂದಿಗಳಾದ ಪ್ರಸನ್ನ, ಜೀವನ್, ರಾಘವೇಂದ್ರ ಹಾಗೂ ಜೀಪು ಚಾಲಕ ನವೀನ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.