Ad Widget

ಕೊರೋನಾ ತಡೆಗೆ ಆಯುರ್ವೇದ ಚಿಕಿತ್ಸೆ ಸಹಕಾರಿ ಹೇಗೆಂದು ತಜ್ಞ ಆಯುರ್ವೇದ ಡಾಕ್ಟರ್ ಹೇಳ್ತಾರೆ ನೋಡಿ

ಪಂಚಗವ್ಯ ಪರಿಹಾರ

Ad Widget Ad Widget

ಕೊರೋನಾ ವೈರಾಣು ಜಗತ್ತಿನಾದ್ಯಂತ ಹರಡಿ ಭೀತಿ ಉಂಟಾಗಿರುವುದನ್ನು ನಾವು ನೋಡುತ್ತಿದ್ದೇವೆ.ಆಯುರ್ವೇದ ಪಂಚಗವ್ಯವು ಇದಕ್ಕೆ ಪರಿಣಾಮಕಾರಿಯಾದಂತಹ ಪರಿಹಾರ ನೀಡಬಲ್ಲುದು ಎಂಬುದು ಸಾಬೀತಾಗಿದೆ. ಪಂಚಗವ್ಯ, ಎಂದರೆ ಆಯುರ್ವೇದ ಆಧಾರದ ಮೇಲೆ ನಿಂತಿರುವ, ಸಾವಿರಾರು ವರ್ಷಗಳ ಚಿಕಿತ್ಸೆಯಿಂದ ಸಾಬೀತುಗೊಂಡಿರುವುದು.ಪಂಚಗವ್ಯ ಆಧಾರವಾಗಿ ಆಯುರ್ವೇದದ ಔಷಧಿಗಳೊಂದಿಗೆ, ವೈರಾಣು/ ಸೋಂಕುಗಳನ್ನು ನಿಯಂತ್ರಿಸುವುದರ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿ ವರ್ಧನೆಗೆ ಅನುಕೂಲಕರವಾಗಿದೆ. ಪ್ರಸ್ತುತ ಅಲೋಪತಿ ಔಷಧ ಗಳೊಂದಿಗೆ, ನಮ್ಮ ದಿನಚರಿಯ ಋತುಚರ್ಯದ ಜೊತೆಗೆ ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆ/ ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯ.
ಆರೋಗ್ಯ ಸಾರ-ಗೋಮೂತ್ರದೊಂದಿಗೆ ಆಯುರ್ವೇದ ಔಷಧಿಯ ಸಂಶೋಧನಾತ್ಮಕ ದ್ರವ್ಯಗಳಾದ; ತುಳಸಿ ,ಹರಿದ್ರಾ, ಕಂಟಕಾರಿ, ಕರ್ಕಟಶೃಂಗಿ, ಕಚೋರ, ಪಿಪ್ಪಲಿ, ಕಟುಕಿ, ಭರಂಗಿ, ಶುಂಠಿ ,ಬೃಂಗರಾಜ, ಅಜಮೊಂಡಾ ,ಬಿಲ್ವ, ಗೋಮೂತ್ರ, ಮಾರೀಚ, ಭದ್ರಮುಷ್ಟಿ, ಏಲ,ಅಮೃತ, ಕೃಷ್ಣ ಜೀರಗ ,ಹಿಪ್ಪಲಿ ,ತ್ರಿಫಲ ಇವುಗಳಿಂದ ತಯಾರಿಸಿದ ಔಷಧಿ.
ಪಂಚಗವ್ಯ ಘೃತ-ಹಾಲು, ತುಪ್ಪ ,ಮೊಸರು, ಗೋಮೂತ್ರ, ಗೋಮಯ ಇವುಗಳಿಂದ ತಯಾರಿಸಿದ ಔಷಧಿ.
ಸುದರ್ಶನವಟಿ ಉಪಯೋಗಿಸುವ ವಿಧಾನ.

Ad Widget Ad Widget
  • 2 ಚಮಚ ಆರೋಗ್ಯಸಾರಕ್ಕೆ, 4 ಚಮಚ ಬಿಸಿ ನೀರನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಾಗೂ ರಾತ್ರಿ ಮಲಗುವಾಗ ಸುದರ್ಶನವಟಿಯೊಂದಿಗೆ ಸೇವಿಸುವುದು.
  • ಪಂಚಗವ್ಯ ಘೃತ ,ಎರಡು ಹನಿ ಮೂಗಿಗೆ ,ಎರಡು ಹನಿ ನಾಭಿ (ಹೊಕ್ಕುಳು) ಗೆ ರಾತ್ರಿ ಮಲಗುವಾಗ ಹಾಕುವುದು.

ಗೋಮೂತ್ರ, antiviral, antifungal ಕ್ರಿಮಿಘ್ನ.
ಆಧುನಿಕ ವಿಜ್ಞಾನದಲ್ಲಿ ಅಂತಿಮ ಅನ್ನೋದು ಇಲ್ಲ, ಆಯುರ್ವೇದದಲ್ಲಿ ಒಂದು ಬಿಂದುವಿನಷ್ಟು ಬದಲಾವಣೆಯೂ ಆಗಿಲ್ಲ.
ಗೋಮೂತ್ರಕ್ಕೆ ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ತುಳಸಿ, ಅಮೃತಬಳ್ಳಿ, ಭದ್ರಮುಷ್ಟಿ, ಬೃಂಗರಾಜ, ಹಿಪ್ಪಲಿ ಇತ್ಯಾದಿ ಮಿಶ್ರಣಮಾಡಿ ಪರಿಣಾಮಕಾರಿ ಔಷಧಿ ತಯಾರಿಸುವುದು.
ಅಗ್ನಿಹೋತ್ರ ಮಾಡುವುದರಿಂದ, ಬೆರಣಿ ತುಪ್ಪ ಸುಡುವುದರಿಂದ ಆಮ್ಲಜನಕದ ಬಿಡುಗಡೆ ಆಗುವುದು ವೈಜ್ಞಾನಿಕ ಸತ್ಯ.
ಪಂಚಗವ್ಯ ಘೃತ ಎರಡು ಬಿಂದು ಮೂಗಿಗೆ ಹಾಕುವುದರಿಂದ ಆಮ್ಲಜನಕ ಉತ್ಪತ್ತಿಯ ಜೊತೆಗೆ ವೈರಾಣುಗಳ ನಾಶ ಸಾಧ್ಯ.
ಎದೆಗೆ ಹಚ್ಚುವುದರಿಂದ ಉಸಿರಾಟದ ತೊಂದರೆ ನಿವಾರಣೆ ಆಗುತ್ತದೆ. ICU ನಲ್ಲಿ ಇರುವವರೂ ಸುಧಾರಣೆ ಹೊಂದುವುದು ಸಾಧ್ಯ ಆಗಿದೆ.
ಆಹಾರ-ಪಥ್ಯ, ಬಿಸಿನೀರು ಬಳಕೆ, ಪರಿಸರದ ಸ್ವಚ್ಛತೆ ಇವು ಅತ್ಯಂತ ಅವಶ್ಯಕ.
ಗೋಮೂತ್ರ ಕುಡಿದರೆ ವಾಸಿಯಾಗುತ್ತದೆ ಅನ್ನೋದು ತಪ್ಪು. ರೋಗಿಗೆ ದ್ರವ್ಯಗಳೊಂದಿಗೆ ನೀಡುವುದು ಮುಖ್ಯ. ಆರೋಗ್ಯಭರಿತ ನೆಮ್ಮದಿಯೊಂದಿಗೆ ಜೀವಿಸಲು ಗೋಮೂತ್ರ, ಪಂಚಗವ್ಯ ಘೃತಗಳಿಂದ ಪರಿಹಾರ ಸಾಧ್ಯ.
ಕೋವಿಡ್ ವೈರಾಣು ಗೋಮೂತ್ರಕ್ಕೆ ನಾಶವಾಗುತ್ತದೆ ಅನ್ನುವುದನ್ನು ಸಂಶೋಧನೆ ಮಾಡಲು ಸರಕಾರಕ್ಕೆ ಪತ್ರ ಬರೆದಿರುವ ಹೊರತಾಗಿ ಅವಕಾಶ ದೊರೆತಿಲ್ಲ.
ಪಂಚಗವ್ಯ ಸೇವನೆಯಿಂದ central nervous system activation, ನರಗಳ ಶಕ್ತಿವರ್ಧನೆ, ಕಣ್ಣಿನ ಸಮಸ್ಯೆ ನಿವಾರಣೆ ,ವಾತ ಹಾಗೂ ಒತ್ತಡ ನಿವಾರಣೆ ಸಾಧ್ಯ.
ನಶ್ಯ ಹಾಗೂ ಹೊರಮೈ ಹಚ್ಚುವಿಕೆಯಿಂದ ಸಮಸ್ಯೆ ಬಾರದು. ಸೇವನೆ ಮಾಡಬೇಕಾದರೆ ರೋಗಿಯ, ಪ್ರಕೃತಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟು ಬಳಸಬೇಕು. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂಕ್ಷ್ಮ ಅಂಗಗಳಾದ ಮೂತ್ರಕೋಶ, ಯಕೃತ್, ಶ್ವಾಸಕೋಶಗಳನ್ನು ಶುದ್ಧೀಕರಿಸಲು ಪಂಚಗವ್ಯದಷ್ಟು ಪರಿಣಾಮಕಾರಿ ಔಷಧಿ ಇನ್ನೊಂದಿಲ್ಲ.
ಬಳಕೆ ಆರಂಭಿಸಿದ ಮೂರು ದಿನಗಳಲ್ಲಿ ಮೂಗು ಕಟ್ಟುವಿಕೆ ಮೊದಲಾದ ಬಾಹ್ಯ ಲಕ್ಷಣಗಳು ನಿವಾರಣೆ ಆಗುತ್ತವೆ.ಏಳು ದಿನಗಳ ಬಳಿಕ ಪರೀಕ್ಷೆ ಮಾಡಿಸಿದರೆ ,- ve ಬರುತ್ತದೆ.
ರೋಗ ಲಕ್ಷಣ ಇಲ್ಲದವರು ದಿನದಲ್ಲಿ ಒಂದು ಬಾರಿ ತೆಗೆದುಕೊಂಡರೆ ಸಾಕು.
ವ್ಯಾಕ್ಸಿನ್ ವೈರಾಣುಗಳ ಮೇಲೆ ಪರಿಣಾಮ ಬೀರುತ್ತದೆ.
ನಮ್ಮದು ಆಹಾರರೂಪಿ.ಮೂಲವಸ್ತುಗಳ ಸಮರ್ಪಕ ಮಿಶ್ರಣಮೂಲಕ ಔಷಧಿ ಆಗಿ ರೂಪಿಸಲಾಗಿದೆ.
ತಾಜಾ ಗೋಮೂತ್ರ ಮೈಗೆ ಮಸಾಜ್ ಮಾಡಿ ಸ್ನಾನ ಮಾಡಿ.
ದೇಶಿ ಗೋವಿನ ಮೂತ್ರ, ಸೆಗಣಿ, ಹಾಲು ಮಾತ್ರ ಬಳಕೆಗೆ ಯೋಗ್ಯ.
ಹರಿದ್ರಾ, ತುಳಸಿ, ಬೇವು,ಲೋಳೇಸರ, ಗೋಮೂತ್ರ ಇವುಗಳ ಮಿಶ್ರಣದಿಂದ ಶ್ರೇಷ್ಠ ಗುಣಮಟ್ಟದ ಸ್ಯಾನಿಟೈಸರ್ ತಯಾರಿಸಬಹುದು.

ವಿಶೇಷ ಸೂಚನೆ, ಪಥ್ಯ

  • ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಒಗ್ಗರಣೆ ಕಲಸಿದ ಅನ್ನಗಳು, ಮೈದಾದಿಂದ ತಯಾರಿಸಿದ ಬ್ರೆಡ್ ,ಬಿಸ್ಕೆಟ್ ,ಕೇಕುಗಳನ್ನು ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಡಿ. ಏಕೆಂದರೆ ಈ ಪದಾರ್ಥಗಳು ಸೋಂಕಿಗೆ ಆಮವಿಷವಾಗಿ ಅವುಗಳ ಸಂತಾನಾಭಿವೃದ್ಧಿಗೆ ಕಾರಣವಾಗುತ್ತವೆ.ಹಾಗಾಗಿ ರೋಗ ಉತ್ಪತ್ತಿಯ ಕಾರಣಗಳನ್ನು ಬಿಡುವುದೇ ಆರ್ಯುವೇದದ ಮೊಟ್ಟಮೊದಲ ಚಿಕಿತ್ಸೆಯಾಗಿ ಹೇಳಲ್ಪಟ್ಟಿದೆ. ನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ, ಕಾಳುಮೆಣಸು, ಹಸಿಶುಂಠಿಯನ್ನು ತಪ್ಪದೇ ಬಳಸಿ.
    ರೋಗನಿರೋಧಕ ಶಕ್ತಿ ಹೆಚ್ಚಲು ಹಾಗೂ ಶರೀರದ ಶಕ್ತಿ ವರ್ಧನೆಗಾಗಿ ಇದನ್ನು ಉಪಯೋಗಿಸಿ.ಇದು
    ವೈರಾಣು ಸೋಂಕು ಬರುವುದನ್ನು ತಡೆಯುತ್ತದೆ.
    ಆಹಾರ ಆಮ್ಲವಿಷವನ್ನು ಶೋಧಿಸುತ್ತದೆ.

ಡಾ ಡಿ.ಪಿ ರಮೇಶ್ ,
ಆಯುರ್ವೇದ ವೈದ್ಯರು.
ಆರೋಗ್ಯ ಭಾರತಿ, ಗೋ ಸೇವಾ ಪಂಚಗವ್ಯ ಚಿಕಿತ್ಸಾ ವಿಷಯ ಪ್ರಮುಖರು.
ಬೆಂಗಳೂರು.

Ad Widget Ad Widget

Leave a Reply

error: Content is protected !!
Scroll to Top
%d bloggers like this: