ಮೆಡಿಸಿನ್‌ನಿಂದ ಕೊರೊನಾ ಹೋಗೊದಿಲ್ಲ, ಒಂದು ಪೆಗ್ ಹಾಕಿದರೆ ಎಲ್ಲ ಹೋಗುತ್ತದೆ – ಹೀಗಂದಿದ್ದು ಓರ್ವ ಮಹಿಳೆ

ನಮ್ಮ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ.ಅಗತ್ಯ ಸೇವೆಗಳು, ವಸ್ತುಗಳು ಬಿಟ್ಟರೆ ಬೇರೆ ಏನೂ ಜನರಿಗೆ ಇನ್ನು 6 ದಿನ ಸಿಗುವುದಿಲ್ಲ.

ಹೀಗಾಗಿ ದೆಹಲಿಯಲ್ಲಿ ಇಂದು ಮದ್ಯದಂಗಡಿಗಳ ಮುಂದೆ ಮದ್ಯ ಖರೀದಿಗೆ ಜನರು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.

ಲಾಕ್ ಡೌನ್ ಘೋಷಣೆಯಾದ ಕೂಡಲೇ ಮದ್ಯಪ್ರಿಯರು ನಶ ಕೇಂದ್ರಗಳಿಗೆ ಎಡತಾಕಿದ್ದಾರೆ. ಈ ಸಂದರ್ಭ ಸರಕರದ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಮದ್ಯ ಖರೀದಿಸುತ್ತಿದ್ದು ಕಂಡುಬಂತು.

ಈ ಸಂದರ್ಭದಲ್ಲಿ ದೆಹಲಿಯ ಶಿವಪುರಿ ಗೀತಾ ಕಾಲೊನಿಯಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಇಂಜೆಕ್ಷನ್, ಲಸಿಕೆಗಳಿಂದ ಕೊರೋನಾ ಓಡುವುದಿಲ್ಲ, ಅವುಗಳಿಂದ ಏನೂ ಪ್ರಯೋಜನವಿಲ್ಲ, ಆಲ್ಕೋಹಾಲ್ ಕೆಲಸ ಮಾಡುತ್ತದೆ, ಅದರಿಂದ ದೇಹಕ್ಕೆ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ. ಮೆಡಿಸಿನ್ ಸಹಾಯ ಮಾಡುವುದಿಲ್ಲ, ಒಂದು ಪೆಗ್ ಹಾಕಿದರೆ ಎಲ್ಲ ಹೋಗುತ್ತದೆ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.

Leave A Reply

Your email address will not be published.