ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಹಾಟ್ ಬಿಕಿನಿಯಲ್ಲಿ ಸೂರ್ಯಂಗೇ ಶಾಖ ನೀಡಿದ ನಟಿ ಈಕೆ !!

ಬಾಲಿವುಡ್ ಹಾಟ್ ರಾಣಿ ದಿಶಾ ಪಠಾಣಿ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇಂದು ತಮ್ಮ ಬಿಕಿನಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಪಡ್ಡೆಗಳ ಮನದಲ್ಲಿ ಕಲ್ಲೊಲವನ್ನು ಎಬ್ಬಿಸಿದ್ದಾಳೆ.

ನಿನ್ನೆ ಮುಂಬೈನಿಂದ ಮಾಲ್ಡಿವ್ಸ್ ಗೆ ಹಾರಿದ್ದ ದಿಶಾ ಇಂದು ಬೀಚ್ ನಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿ, ಮೈ ತುಂಬಾ ಧಗೆ ಬರಿಸಿಕೊಂಡು ಉರಿಯುವ ಸೂರ್ಯನಿಗೇ ಶಾಖ ನೀಡುತ್ತಿದ್ದಾಳೆ. ಹಾಗೆ ಬಿಸಿಲಿಗೆ ಮೈಯೊಡ್ಡಿದ ಸೆಕ್ಸಿ ಫೋಟೋವನ್ನ ದಿಶಾ ಶೇರ್ ಮಾಡಿಕೊಂಡಿದ್ದಾಳೆ. ಸದ್ಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ನೀಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ನಿನ್ನೆ ತಾನೇ ಮುಂಬೈ ವಿಮಾನ ನಿಲ್ದಾಣಕ್ಕೆ ಕೆಲ ಸಮಯದ ಅಂತರದಲ್ಲಿಯೇ ದಿಶಾ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಮಾಲ್ಡಿವ್ಸ್ ಗೆ ತೆರಳುತ್ತಿದ್ದಾರೆ ಎಂಬ ಸುದ್ದಿಗಳು ಪುಕ್ಕ ಕಟ್ಟಿಕೊಂಡು ಹರಿದಾಡಿದ್ದವು. ಇದೀಗ ದಿಶಾ ಫೋಟೋ ಮೂಲಕ ಮಾಲ್ಡಿವ್ಸ್ ನಲ್ಲಿರೋದನ್ನ ಖಚಿತಪಡಿಸಿದ್ದಾರೆ. ಆದ್ರೆ ಟೈಗರ್ ಶ್ರಾಫ್ ಮಾತ್ರ ಇನ್ನು ಯಾವುದೇ ಫೋಟೋ ಶೇರ್ ಮಾಡಿಕೊಂಡಿಲ್ಲ.

ಈ ಹಿಂದೆ ಕೂಡ ದಿಶಾ ಮತ್ತು ಟೈಗರ್ ಜೊತೆಯಾಗಿ ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಸೋಲೋ ಫೋಟೋಗಳನ್ನ ಮಾತ್ರ ಹಂಚಿಕೊಳ್ಳುತ್ತಿರುತ್ತಾರೆ. ಒಟ್ಟಾಗಿ ಹಂಚಿಕೊಂಡರೆ ತಮ್ಮ ಪ್ರೀತಿಯ ಸುದ್ದಿ ಹೊರಬಹುದೆಂಬ ಭಯ ಇರಬಹುದೇನೋ. ಆದ್ರೂ ಈಗಾಗಲೇ ಇಬ್ಬರ ಮಧ್ಯೆ ಪ್ರೀತಿ ಇದೆ ಎಂದು ಬಾಲಿವುಡ್ ನ ಗಲ್ಲಿಗಳು ಬೊಂಬಡಾ ಬಾರಿಸಿ ಹೇಳುತ್ತಿವೆ. ಆದರೆ ಇವರಿಬ್ಬರೂ ಈ ಕುರಿತು ಪ್ರತಿಕ್ರಿಯೆ ನೀಡದೆ ಕೇವಲ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.

Leave A Reply

Your email address will not be published.