ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆ
ಪುತ್ತೂರು: ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆಯು ಪುತ್ತೂರಿನ ಅಮರ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾನೆಯನ್ನು ದಕ್ಷಿಣ ಕನ್ನಡ ಕೃಷಿ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಜೆಡಿಎಸ್ ಮಹಿಳಾ ಮೋರ್ಚದ ಅಧ್ಯಕ್ಷರಾದ ಶ್ರೀಮತಿ ಸುಮತಿ ಎಸ್ ಹೆಗ್ಡೆ ಉದ್ಘಾಟಿಸಿದರು. ಶಾಸಕಾರದ ಸಂಜೀವ ಮಠಂದೂರು, ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಭೋರ್ಕರ್ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹೇಮನಾಥ ಶೆಟ್ಟಿ ಕಾವು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು , ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರಧಾನ ಭಾಷಣಕಾರರಾಗಿ ರವಿಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಘನ ಉಪಸ್ಥಿತರಾಗಿ ರವೀಂದ್ರನಾಥ ಶೆಟ್ಟಿ ನುಳಿಯಾಲು, ಡಾ.ರಘ ಬೆಳ್ಳಿಪ್ಪಾಡಿ, ಜೀವಂಧರ್ ಜೈನ್, ಶ್ರೀನಿವಾಸ್ ಮಿಜಾರ್, ಶೇಷಪ್ಪ ನೆಕ್ಕಿಲು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನವೀನ್ ರೈ ಚೆಲ್ಯಡ್ಕ, ನಂದಕುಮಾರ್, ಹೇಮಂತ್ ಆರ್ಲಪದವು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲಿಗೆ ಪುತ್ತೂರಿನ ಧರ್ಬೆ ವೃತ್ತಕ್ಕೆ ಅಂಬೇಡ್ಕರ್ ರವರ ಭಾವಚಿತ್ರವಿಟ್ಟು ವೃತ್ತಕ್ಕೆ ಡಾ. ಅಂಬೇಡ್ಕರ್ ರವರ ಹೆಸರನ್ನು ನಾಮ ಕರಣ ಮಾಡಿ ನಂತರ ಅಲ್ಲಿಂದ ಮೆರವಣಿಗೆ ಮೂಲಕ ಪುತ್ತೂರು ಗಾಂಧಿ ಕಟ್ಟೆಯತ್ತ ಸಾಗಿಬಂದು ಗಾಂಧಿ ಪ್ರತಿಮೆಗೆ ಹೇಮನಾಥ ಶೆಟ್ಟಿಯವರು ಹೂವಿನ ಹಾರ ಹಾಕುವ ಮೂಲಕ ಮೆರವಣಿಗೆಗೆ ನಾಂದಿ ಹಾಡಲಾಯಿತು.