ಮಂಗಳೂರಿನಲ್ಲಿ ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಸವಾರ | ನುಗ್ಗಿ ಬಂದ ಖಾಸಗಿ ಬಸ್ ಹರಿದು ಸವಾರ ಮೃತ್ಯು

ಮಂಗಳೂರಿನಲ್ಲಿ ಇಂದು ಬೆಳoಬೆಳಗ್ಗೆ ಕಾರೊಂದು ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಖಾಸಗಿ ಬಸ್ ಹರಿದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಎಕ್ಕೂರಿನಲ್ಲಿ ನಡೆದಿದೆ.
ತೊಕ್ಕೋಟ್ಟಿನ ನಿವಾಸಿ ಧೀಮಂತ್ ರಬೀಂದ್ರ ಸಾವನ್ನಪ್ಪಿದ ದುರ್ದೈವಿ. ಧೀಮಂತ್ ರಬೀಂದ್ರ ಮೂಲತ: ಅತ್ತಾವರದವರಾಗಿದ್ದು ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಮಂಗಳೂರಿನ ಮಾಲ್ ಒಂದರಲ್ಲಿ ಲೆನ್ಸ್ ಕಾರ್ಟ್ ಡಾಟ್ ಕಾಮ್ ಉದ್ಯೋಗಿಯಾಗಿದ್ದ ಅವರು ಇಂದು ಬೆಳಗ್ಗೆ ಅವರು ತೊಕ್ಕೊಟ್ಟಿನಿಂದ ಮಂಗಳೂರಿಗೆ ಸ್ಕೂಟರಲ್ಲಿ ತೆರಳುತ್ತಿದ್ದರು. ಆಗ ಕಾರೊಂದು ಅವರ ಸ್ಕೂಟರಿಗೆ ಡಿಕ್ಕಿ ಹೊಡೆದಿತ್ತು. ಆಗ ರಸ್ತೆಗೆ ಅವರು ಎಸೆಯಲ್ಪತ್ತಿದ್ದರು.ಆಗ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ಆತನ ದೇಹದ ಮೇಲೆ ಹರಿದು ಹೋಗಿದೆ.
ಆದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೈವೇ ಪೆಟ್ರೋಲಿಂಗ್ ವಿಭಾಗದ ಟ್ರಾಫಿಕ್ ಪೊಲೀಸರು ಗಂಭೀರ ಗಾಯಗೊಂಡ ರಬೀಂದ್ರ ಅವರನ್ನು ತಮ್ಮ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಸ್ಕೂಟರ್ ಸವಾರ ಮೃತ ಪಟ್ಟಿದ್ದ.