ಗುತ್ತಿಗಾರು : ಆಂಬುಲೆನ್ಸ್ ಖರೀದಿ, ನಿರ್ವಹಣೆ ಮತ್ತು ಸೇವೆ ಉದ್ದೇಶಕ್ಕಾಗಿ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ರಚನೆ

ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಮಡಪ್ಪಾಡಿ, ಹರಿಹರ ಪಲ್ಲತ್ತ‌ಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಸುಬ್ರಮಣ್ಯ, ನೆಲ್ಲೂರು ಕೆಮ್ರಾಜೆ ಗ್ರಾಮ ಈ ಭಾಗದ ಸಾರ್ವಜನಿಕರ ಅವಶ್ಯಕತೆಗಳಲ್ಲಿ ಒಂದಾದ ಆಂಬುಲೆನ್ಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಗುತ್ತಿಗಾರಿನ ಜನಶಿಕ್ಷಣ ಕೇಂದ್ರದಲ್ಲಿ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ಅನ್ನು ರಚಿಸಲಾಗಿದೆ.

ಟ್ರಸ್ಟ್ ನ ಅಧ್ಯಕ್ಷರಾಗಿ ಚಂದ್ರಶೇಖರ್ ಕಡೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಪಡ್ರೆ, ಕೋಶಾಧಿಕಾರಿಯಾಗಿ ಸುಪ್ರೀತ್ ಗುಡ್ಡೆಮನೆ ಹಾಗೂ ಸದಸ್ಯರುಗಳಾಗಿ ಯತೀoದ್ರ ಕಟ್ಟೆಕೋಡಿ, ಮೋಹನ್ ದಾಸ್ ಶಿರಾಜೆ, ವಿಶ್ವನಾಥ್ ಆಚಳ್ಳಿ, ಸುಕುಮಾರ್ ಕೋಡೊಂಬು ಆಯ್ಕೆ ಮಾಡಲಾಯಿತು.

ಈ ವೇಳೆ ಸಂಸ್ಥೆಯ ನೋಂದಾವಣೆಯ ಬಳಿಕ ಇತರ ಸಮಿತಿಗಳನ್ನು ರಚಿಸಿ, ಸಾರ್ವಜನಿಕ ದೇಣಿಗೆಯ ಸಂಗ್ರಹದಿಂದ ಕಾರ್ಯಪ್ರವೃತ್ತರಾಗುವುದೆಂದು ತೀರ್ಮಾನಿಸಲಾಯಿತು.

Leave A Reply

Your email address will not be published.