ಸೆಲ್ಫಿ ತೆಗೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವ ಜೋಡಿ ಸಾವು

ಸೆಲ್ಫಿ ತೆಗೆಯುವ ಸಂಧರ್ಭ ಕಾಲು ಜಾರಿ ನದಿಗೆ ಬಿದ್ದು ಯುವ ಜೋಡಿಯೊಂದು ನದಿಗೆ ಬಿದ್ದು ಸಾವಿಗೀಡಾದ ಬಗ್ಗೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಿಂದ ವರದಿಯಾಗಿದೆ.

ಬೀದರ್ ನಿಂದ ಆಗಮಿಸಿದ ಯುವ ಜೋಡಿಯೊಂದು ಸೋಮವಾರ ಕಾಳಿ ನದಿಪಾಲಾಗಿದ್ದು, ಮಂಗಳವಾರ ಇಬ್ಬರ ಬೆಳಗ್ಗೆ ಶವ ಪತ್ತೆಯಾಗಿದೆ.

ಬೀದರ್ ನ ಕರ್ನಾಟಕ ಕಾಲೇಜ್ ನ ಬಿಎ ವಿದ್ಯಾರ್ಥಿ ಪುರುಷೋತ್ತಮ ಪಾಟೀಲ್ ಹಾಗೂ ಬೀದರ್ ಮೂಲದ ಕಲಬುರ್ಗಿಯಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವ ರಕ್ಷಿತಾ ಎಸ್. ಎಂಬವರೇ ಮೃತ ದುರ್ದೈವಿಗಳು.

ಸೋಮವಾರ ದಾಂಡೇಲಿಯಿಂದ ಆಟೋ ರಿಕ್ಷಾ ಮೇಲೆ ಬಂದಿದ್ದ ಜೋಡಿ ಅಂಬಿಕಾ ನಗರದ ಸೂಪಾ ಅಣೆಕಟ್ಟೆಯ ಸಮೀಪ ಇರುವ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದಿದ್ದರು. ಸೇತುವೆ ಮೇಲೆ ಸಿಕ್ಕ ಯುವತಿಯ ಮೊಬೈಲ್ ಸಿಕ್ಕಿತ್ತು.ಅದರ ಆಧಾರದ ಮೇಲೆ ಆಕೆಯ ಮನೆಯವರಿಗೆ ಕರೆ ಮಾಡಿ ಗುರುತು ಪತ್ತೆ ಮಾಡಲಾಗಿತ್ತು.

ಮಂಗಳವಾರ ಬೆಳಗ್ಗೆ ಫ್ಲೈ ಕ್ಯಾಚರ್ ತಂಡದ ಸದಸ್ಯರು ನದಿಯಲ್ಲಿ ಹುಡುಕಿ ಇಬ್ಬರ ಶವಗಳನ್ನು ಕಾಳಿ ನದಿಯಿಂದ ಹೊರ ತೆಗೆದರು.

ರಾಮನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.