ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತಿರುವು :ಸಿಡಿ ಲೇಡಿಯ ಮತ್ತೊಂದು ವಿಡಿಯೋ ರಿಲೀಸ್ , ಜಾರಕಿಹೊಳಿಗೆ ಮತ್ತೊಮ್ಮೆ ಎದುರಾಯಿತು ಸಂಕಷ್ಟ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿ.ಡಿಯಲ್ಲಿ ಇದ್ದ ಕಾಣಿಸಿಕೊಂಡಿದ್ದ ಯುವತಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ.

ಪ್ರಕರಣದ ಕಿಂಗ್ ಪಿನ್ ಗಳು ಎನ್ನಲಾದ ಮಾಜಿ ಪತ್ರಕರ್ತರಾದ ನರೇಶ್ ಮತ್ತು ಶ್ರವಣ್ ತನ್ನನ್ನು ಈ ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ ಎಂದು ಯುವತಿ ಎಸ್ ಐಟಿ ಮುಂದೆ ಹೇಳಿಕೆ ನೀಡಿದ್ದಾಳೆಂದು ಸೋಮವಾರ ವರದಿಯಾಗಿತ್ತು. ಇದರಿಂದ ಸಿ.ಡಿ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿತ್ತು. ಆದರೆ ಯುವತಿ ಇಂದು ಮತ್ತೊಂದು ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ್ದು, ತಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾಳೆ.

ನಾನು ಎಸ್ ಐಟಿ ಅಧಿಕಾರಿಗಳ ಮುಂದೆ ಉಲ್ಟಾ ಹೊಡೆದಿಲ್ಲ. ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದೇನೆ. ನಾನು ನೀಡಿದ ದೂರು ಮತ್ತು ನ್ಯಾಯಧೀಶರ ಸಮ್ಮುಖದಲ್ಲಿ ಕೊಟ್ಟ 164 ಹೇಳಿಕೆ ಒತ್ತಡದಿಂದ ನೀಡಿದ್ದೇನೆ. ಆದ್ದರಿಂದ ಮತ್ತೊಮ್ಮೆ ಹೇಳಿಕೆ ಪಡೆಯಬೇಕೆಂದು ತನಿಖಾಧಿಕಾರಿಗಳಿಗೆ ಕೇಳಿಕೊಂಡಿದ್ದಾಗಿ ವರದಿ ಆಗಿದ್ದು, ಇದು ಸತ್ಯಕ್ಕೆ ದೂರಾಗಿರುತ್ತದೆ. ನಾನು ಈಗಲೂ ಕೂಡ ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದೇನೆ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯವರನ್ನು ವಿಚಾರಣೆಗೆ ಕರೆಸದಿರುವ ಕುರಿತು ದೂರು ನೀಡಿದ್ದು, ಅವರು ಕೋವಿಡ್ ಪೀಡಿತರಂತೆ ನಟಿಸುತ್ತಿದ್ದು, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಯನ್ನು ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ ಎಂದು ಯುವತಿ ಹೇಳಿದ್ದಾಳೆ.

ತಾನು ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಹೌದು. ಆದರೆ ಯಾವುದೇ ಮನಪರಿವರ್ತನೆಯಾಗಿ ಹೇಳಿಕೆ ನೀಡಿಲ್ಲ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ.

Leave A Reply

Your email address will not be published.