ಹೆಜಮಾಡಿ ಬಳಿ ಕಾರು ಅಪಘಾತ ಇಬ್ಬರಿಗೆ ಗಾಯ

ಉಡುಪಿ , ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರು ನಡ್ಸಾಲು ಬಳಿ ವ್ಯಾಗನಾರ್ ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಗಿದೆ.

ಗಾಯಾಳುಗಳನ್ನು ಮೂಲ್ಕಿ ಸಮೀಪದ ಶಿಮಂತೂರು ನಿವಾಸಿಗಳಾದ ವಿಜಯ ಮಾಲತಿ ಭಟ್ ಹಾಗೂ ಪ್ರತಿಮಾ ಭಟ್ ಎಂದು ಗುರುತಿಸಲಾಗಿದೆ.

ವ್ಯಾಗನಾರ್ ಕಾರು ಪಡುಬಿದ್ರಿ ಕಡೆಯಿಂದ ಶಿಮಂತೂರು ಕಡೆಗೆ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರು ನಡ್ಸಾಲು ಬಳಿ ಕಾರು, ಚಾಲಕಿಯ ನಿಯಂತ್ರಣ ತಪ್ಪಿ ಅಪಘಾತದ ನಡೆದಿದೆ.

ಇದರಿಂದ ಕಾರಿಗೆ ಹಾನಿಯಾಗಿದ್ದು, ಕಾರಿನಲ್ಲಿದ್ದ ಚಾಲಕಿ ಸಹಿತ ಇಬ್ಬರು ಗಾಯಾಳು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave A Reply

Your email address will not be published.