ಹೆಲ್ಮೆಟ್ ಧರಿಸದೇ ಮೂವರು ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಮೊಬೈಲ್ನಲ್ಲಿ ಮಾತನಾಡಿದ ಮೂವರು ಮಹಿಳಾ ಕಾನ್ಸ್ಟೆಬಲ್ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿದೆ.

ಈ ಮೂವರು ಮಹಿಳಾ ಕಾನ್ಸ್ಟೆಬಲ್ಗಳಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದೆ.ಇವರ ವಿರುದ್ದ ಇಲಾಖಾವಾರು ತನಿಖೆಗೆ ಆದೇಶಿಸಲಾಗಿದೆ.

ಪೊಲೀಸರಿಗೂ ದಂಡ ವಿಧಿಸಿರುವುದರಿಂದ ಇದೀಗ ಪೊಲೀಸ್ ಇಲಾಖೆ ಭಾರಿ ಶ್ಲಾಘನೆಗೆ ಒಳಗಾಗಿದೆ.ಕಾನೂನು ಎಲ್ಲರಿಗೂ‌ ಒಂದೇ ಎಂಬುದನ್ನು ತೆಲಂಗಾಣ ಪೊಲೀಸರು ತೋರಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ದೃಶ್ಯವಳಿಗಳನ್ನು ಆಧರಿಸಿ ದಂಡ ವಿಧಿಸಲಾಗಿದ್ದು, ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬರು ತೆಲಂಗಾಣದ ಟೌನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಿವಿಲ್ ಕಾನ್‌ಸ್ಟೆಬಲ್ ಎನ್ನಲಾಗಿದೆ.

Leave A Reply

Your email address will not be published.