ವಿಟ್ಲ : ಪಿಕಪ್ -ಕಾರು ನಡುವೆ ಭೀಕರ ಅಪಘಾತ

ವಿಟ್ಲ: ಪಿಕಪ್ ವಾಹನ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಪವಾಡಸದೃಶವಾಗಿ ಪಾರಾದ ಘಟನೆೆನಡೆದಿದೆ.

ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಅಕ್ಷಯ ಸಭಾಭವನದ ಮುಂಭಾಗ ರವಿವಾರ ಈ ಘಟನೆ ನಡೆದಿದೆ.

ಮಂಗಳೂರಿನ ಕಡೆಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿನ ಚಾಲಕ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಿಕಪ್ ಗೆ ಢಿಕ್ಕಿ ಹೊಡೆದಿದೆ.

ಕಾರು ಭಾಗಶಃ ಜಖಂ ಗೊಂಡಿದ್ದರೂ ಚಾಲಕ ಪಾರಾಗಿದ್ದಾರೆ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.