ವಿಶೇಷ ನಮಾಜ್ ಮಾಡುತ್ತೇನೆ, ಉತ್ತಮ ವರ ದೊರೆಯುತ್ತಾನೆಂದು ನಂಬಿಸಿ ಅತ್ಯಾಚಾರ ಎಸಗಿದ ಮೌಲ್ವಿ

ಮೈಸೂರು : ಮಸೀದಿಯಲ್ಲಿ ದೇವರಿಗೆ ವಿಶೇಷ ನಮಾಜ್‌ ಸಲ್ಲಿಸಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ, ಮೌಲ್ವಿಯೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹುಣಸೂರಿನಲ್ಲಿ ನಡೆಸಿದೆ.

ಪರಿಚಿತಳಾಗಿದ್ದ ಈ ಯುವತಿಗೆ ಉತ್ತಮ ವರ ಸಿಗಬೇಕಾದರೆ ವಿಶೇಷ ನಮಾಜ್‌ ಮಾಡುತ್ತೇನೆ ಎಂದು ಹೇಳಿದ್ದ. ಅಮಾಯಕ ಹುಡುಗಿ ನಂಬಿದ್ದಳು. ಹೀಗೆ ಯುವತಿಯ ವಿಶ್ವಾಸ ಗಳಿಸಿಕೊಂಡ ಈತ ನಂತರ ಅವಕಾಶ ನೋಡಿ ಯಾರೂ ಇಲ್ಲದ ಸಮಯದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ.

ಹುಣಸೂರಿನ ಲಾಲ್​​​​ಬನ್ ಬೀದಿಯ ವಾಸಿ, ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ವಿಶೇಷ ನಮಾಜ್ ಹೆಸರಿನಲ್ಲಿ ಅತ್ಯಾಚಾರ ಎಸಗಿದ ಮೌಲ್ವಿ.

ಈ ಘಟನೆ ಹುಣಸೂರಿನಲ್ಲಿ ತಾಲ್ಲೂಕಿನ ಚಿಲ್ಕುಂದ ಗ್ರಾಮದಲ್ಲಿ ನಡೆದಿದೆ. ಈತನ ಪೈಶಾಚಿಕ ಕೃತ್ಯದ ಕುರಿತು ಯುವತಿಯ ತಂದೆಯು ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.