ದ.ಕ.ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜಿದ್ದರೂ 4ರಲ್ಲಿ ಮಾತ್ರ ಕೋವಿಡ್ ಪರೀಕ್ಷೆ | ವಾರದೊಳಗೆ ಎಲ್ಲಾ ಕಾಲೇಜಿನಲ್ಲೂ ವ್ಯವಸ್ಥೆಗೆ ಸಚಿವ ಡಾ.ಸುಧಾಕರ್ ಖಡಕ್ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿದ್ದರೂ ಕೇವಲ 4 ರಲ್ಲಿ ಮಾತ್ರ ಕೊರೊನಾ ಪರೀಕ್ಷೆ ನಡೆಯುತ್ತಿದೆ.ಇನ್ನುಳಿದ ಕಾಲೇಜುಗಳಲ್ಲಿ ಯಾಕೆ ಟೆಸ್ಟ್ ನಡೆಯುತ್ತಿಲ್ಲ , ಟೆಸ್ಟ್ ಮಾಡದ ಕಾಲೇಜುಗಳ ಅಡ್ಮೀಷನ್ ಹೋಲ್ಡ್ ಮಾಡುತ್ತೇನೆ, ಒಂದು ವಾರದ ಒಳಗೆ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕೊವಿಡ್ 19 ಟೆಸ್ಟ್ ಗೆ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ವೈದ್ಯಕೀಯ ಕಾಲೇಜುಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.

ಮಂಗಳೂರಿನಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು,ರಾಜ್ಯದಲ್ಲಿ ಇನ್ನು ಮುಂದೆ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸುವುದಿಲ್ಲ, ಕೇವಲ ಕೊರೊನಾ ಸೊಂಕಿನ ಲಕ್ಷಣ ಇದ್ದರೆ ಮಾತ್ರ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಬಗ್ಗೆ ಜನರು ಭಯಭೀತರಾಗಿದ್ದು ಇದನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಲಾಗಿದ್ದು , ಈ ಮನಸ್ಥಿತಿಯನ್ನು ಹೊಗಲಾಡಿಸುವ ಅವಶ್ಯಕತೆ ಇದೆ ಎಂದರು.

https://www.facebook.com/DrSudhakarK.Official/videos/3091881987537506/?app=fbl

ಮಹಾರಾಷ್ಟ್ರದಿಂದ ಬಂದ 98% ಜನರಿಗೆ ಕೊರೊನಾ ಸೊಂಕು ಬಂದಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಮಹಾರಾಷ್ಟ್ರದಿಂದ ಬಂದವರನ್ನು ತಂತ್ರಜ್ಞಾನವನ್ನು ಬಳಸಿ ಶಿಸ್ತು ಬದ್ದವಾಗಿ ಅವರ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು ಎಂದರು.

ಕೊರೊನಾ ಸೊಂಕು ಬಂದರೆ ಸೊಂಕಿತ ವ್ಯಕ್ತಿಯ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು, ಕಂಟೋನ್ಮೆಂಟ್ ಝೋನ್ ಗಳು ಇನ್ನು ಮುಂದೆ ಇರುವುದಿಲ್ಲ, ಕೇವಲ ಸೊಂಕಿತನ ಮನೆಯನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ .ಶಾಂತಿಗೋಡು,ಮೇಯರ್ ಇದಿವಾಕರ್,ಜಿಲ್ಲಾಧಿಕಾರಿ ಸಿಂಧೂಬಿ.ರೂಪೇಶ್,ಜಿ.ಪಂ.ಸಿಇಓ ಡಾ.ಸೆಲ್ವಮಣಿ ಮೊದಲಾದವರಿದ್ದರು.

Leave A Reply

Your email address will not be published.