ಅವಧಿ ಪೂರ್ಣಗೊಂಡ ಗ್ರಾ.ಪಂ.ಗಳು ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಸರಕಾರದ ಸೂಚನೆ

ಅವಧಿ ಪೂರ್ಣಗೊಂಡಿರುವ ಗ್ರಾ.ಪಂ.ಗಳು ಯಾವುದೇ ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಎಲ್ಲಾ ಜಿ.ಪಂ.,ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸರಕಾರದಿಂದ ಸೂಚನೆ ನೀಡಲಾಗಿದೆ.

ಸರಕಾರದ ಮುಂದಿನ ಆದೇಶ ಬರುವವರೆಗೂ ಯಾವುದೇ ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿ ಬಿ.ನವೀನ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

Leave A Reply

Your email address will not be published.