ಮಡಿಕೇರಿ | 5 ವರ್ಷದ ಮಗುವಿನ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕನಿಂದ ಅತ್ಯಾಚಾರ

ಮಡಿಕೇರಿ(ಜೂ.03): 5 ವರ್ಷದ ಪುಟ್ಟಮಗುವಿನ ಮೇಲೆ 14 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವಂತಹ ಆಘಾತಕಾರಿ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.

ನೋವಿನಿಂದ ಬಳಲುತ್ತಿದ್ದ ಮಗುವನ್ನು ಆರೋಗ್ಯ ತಪಾಸಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ತನಿಖೆ ನಡೆಸಿದಾಗ ನೆರೆಮನೆಯ ಬಾಲಕನಿಂದ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಬಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಡಿಕೇರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.