ಕುದ್ಮಾರು | ಮರಳು ಅಕ್ರಮ ಸಾಗಾಟ | ಲಾರಿ ವಶಕ್ಕೆ

ಕಡಬ ತಾಲೂಕು ಕುದ್ಮಾರು ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಜಿ.ವಿ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ ನಿಂತಿಕಲ್ಲು ಕಡೆಯಿಂದ ಸವಣೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಪರಿಶೀಲಿಸುವ ಸಲುವಾಗಿ ಸೂಚನೆ ನೀಡಿ ನಿಲ್ಲಿಸಿದ ವೇಳೆ ಟಿಪ್ಪರ್ ಲಾರಿಯ ಚಾಲಕ ಓಡಿ ಪರಾರಿಯಾಗಿದ್ದು,  ಸದ್ರಿ ಲಾರಿಯಲ್ಲಿ ಮರಳು ಸಾಗಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಆರೋಪಿ ಚಾಲಕನು ಸರಕಾರದ ಸ್ವತ್ತಾದ ಮರಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವ ಬಗ್ಗೆ ಸಂಶಯಗೊಂಡು ಪಂಚರ ಸಮಕ್ಷಮ ಮಹಜರು ನಡೆಸಿ ಸದ್ರಿ ಟಿಪ್ಪರ್ ಲಾರಿಯನ್ನು ಮರಳು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

 

ಓಡಿ ಪರಾರಿಯಾದ ಚಾಲಕ ಹಾಗೂ ಅಕ್ರಮ ವ್ಯವಹಾರಕ್ಕೆ ಟಿಪ್ಪರ್ ಲಾರಿಯನ್ನು ನೀಡಿದ ಲಾರಿಯ ನೊಂದಣಿ ಮಾಲಕರ ವಿರುದ್ದ  ಬೆಳ್ಳಾರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Leave A Reply

Your email address will not be published.