ಪತ್ನಿಯ ಕಿರುಕುಳಕ್ಕೆ ಬೇಸತ್ತು ಜೀವ ತೆತ್ತನೇ ಪತಿರಾಯ ? ಬೆಂಗಳೂರಿನಲ್ಲೊಂದು ಅಪರೂಪದ ಘಟನೆ

ಸಮಾಜದಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಅದನ್ನು ನಾವು ದಿನವೂ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಆದರೆ ಇಲ್ಲಿ ಪತ್ನಿ ಕಿರುಕುಳ ತಾಳಲಾರದೆ ಪತಿರಾಯನೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಲ್ಲದೆ ಈ ಕಿರುಕುಳದಲ್ಲಿ ಪತ್ನಿಯ ಜೊತೆ ಅತ್ತೆಯ ಕೈವಾಡವಿರುವುದು ತಿಳಿದುಬಂದಿದೆ.

ಬೆಂಗಳೂರಿನ ಮೈಸೂರು ರಸ್ತೆಯ ಟಿಂಬರ್
ಯಾರ್ಡ್ ಲೇಔಟ್ ನಿವಾಸಿ 30 ವರ್ಷದ ದರ್ಶನ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ದರ್ಶನ್ ಗೆ ಕೇವಲ ಐದು ತಿಂಗಳ ಹಿಂದೆ ಮದುವೆಯಾಗಿತ್ತು. ಕೆಂಗೇರಿ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ ದರ್ಶನ್ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮದುವೆಯಾಗಿ ಒಂದು ತಿಂಗಳ ಕಾಲ ಎಲ್ಲವೂ ಚೆನ್ನಾಗಿತ್ತು. ದರ್ಶನ್ ದಂಪತಿ ಹೆಚ್ಚಾಗಿ ಪತ್ನಿಯ ತವರಿನಲ್ಲೇ ಇದ್ದರು. ಇದೀಗ ಇದ್ದಕ್ಕಿದ್ದಂತೆ ದರ್ಶನ್ ಆತ್ಮಹತ್ಯೆಗೆ ಶರಣಾಗಿದ್ದು ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಪತ್ನಿ ಮತ್ತು ಅತ್ತೆ ಕಿರುಕುಳವೇ ಕಾರಣ ಎಂದು ಬರೆದುಕೊಂಡಿದ್ದಾನೆ. ಆದರೆ ಇತ್ತ ದರ್ಶನ್ ನ ಮನೆಯವರು ದರ್ಶನ್ ನಾ ಪತ್ನಿ ಮೊಬೈಲ್ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು ಎಂದು ದೂರಿದ್ದಾರೆ. ಆತನ ಪತ್ನಿಗೆ ಇನ್ನೊಬ್ಬರ ಗೆಳೆತನ ಇರುವ ಬಗ್ಗೆ ದರ್ಶನ್ ಮನೆಯವರಿಗೆ ಅನುಮಾನ ಮೂಡಿದೆ.

ದರ್ಶನ್ ನ ಮನೆಯವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.