ಉಡುಪಿಯಲ್ಲಿ ಕೋರೋನಾ ‘ ಸ್ಫೋಟ ‘ | ಒಂದೇ ದಿನ 210 ಕೋರೋನಾ ಸೋಂಕಿತರ ಪತ್ತೆ | ಒಟ್ಟು ಸೋಂಕಿತರು 470

ಉಡುಪಿಯಲ್ಲಿ ಇವತ್ತು 210 ಜನರಿಗೆ ಒಂದೇ ದಿನ ಕೊರೋನಾ ಪಾಸಿಟೀವ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಅವರು ತಿಳಿಸಿದ್ದಾರೆ.

ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದರು ಎಂದು ತಿಳಿದುಬಂದಿದೆ. ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಗ್ರೀನ್ ಜಿಲ್ಲೆ ಕಡುಗೆಂಪಾಗಿದೆ.

ನಿನ್ನೆ ಒಟ್ಟು 73 ಜನ ಉಡುಪಿಯೊಂದರಿಂದಲೇ ದಾಖಲೆಯ ಸಂಖ್ಯೆಯ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆ ಉಡುಪಿ ಜಿಲ್ಲೆಯಲ್ಲಿ ಸೊಂಕಿತರಾಗಿರುವ ಒಟ್ಟು 73 ಸೋಂಕಿತರ ಪೈಕಿ 68 ಜನರನ್ನು ಪತ್ತೆ ಮಾಡಲಾಗಿ ಕ್ವಾರಂಟೈ ನ್ಗೆ ಒಳಪಡಿಸಲಾಗಿದೆ. ಆದರೆ ಐವರು ಫೋನ್ ಸ್ವಿಚ್ ಆಫ್ ಮಾಡಿ ಕೂತಿದ್ದಾರೆ.

ಮಹಾರಾಷ್ಟ್ರದ, ಈ ಆಮದು ಕೊರೋನಾದ ವಿಷಯದಲ್ಲಿ ಜಿಲ್ಲಾಡಳಿತದ ತಪ್ಪು ಎನಿಲ್ಲವಾದರೂ, ಕೆಲ ಕ್ವಾರಂಟೈನ್ ಮಾಡಿ ಕೂಡಿ ಹಾಕಿಡಬೇಕಿದ್ದ ಜನರನ್ನು ತಿರುಗಾಡಲು ಬಿಟ್ಟ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಆಕ್ರೋಶ ಕೇಳಿಬರುತ್ತಿದೆ.

Leave A Reply

Your email address will not be published.