ಮದುವೆಗೆ ಮುಂಚೆಯೇ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಾತಿ ನತಾಶ ಗರ್ಭಿಣಿ | ಮಗುವನ್ನು ಹಾರ್ದಿಕವಾಗಿ ಸ್ವಾಗತಿಸಲು ಹಾರ್ದಿಕ್ ಆಂಡ್ ಜೋಡಿ ರೆಡಿ

ಮುಂಬೈ: ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಆಲ್‍ರೌಂಡರ್ ಆಟಗಾರನಾಗಿದ್ದು, ತಾವು ಈಗ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹುಟ್ಟಲಿರುವ ಕೂಸನ್ನು ಹಾರ್ದಿಕವಾಗಿ ಸ್ವಾಗತಿಸಲು ಕಾತರರಾಗಿದ್ದಾರೆ.

ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಸಾಂಗತ್ಯವನ್ನು ಹೊಂದಿದ್ದೇವೆ. ಈ ಬಾಂದವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ ಎಂದು ಈ ಕುರಿತು ಇನ್‍ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ ಈ ರೀತಿ ಬರೆದುಕೊಂಡಿದ್ದಾರೆ.

28 ವರ್ಷದ ನಟಿ ನತಾಶಾ ಬಾಲಿವುಡ್​ನಲ್ಲಿ 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುತ್ತಾರೆ. ಹಿಂದಿ ಬಿಗ್ ಬಾಸ್ 8 ರ ಸ್ಪರ್ಧಿಯಾಗಿದ್ದರು. ಕನ್ನಡದಲ್ಲಿ ದುನಿಯಾ ವಿಜಿ ಅಭಿನಯದ ದನಕಾಯೋನು ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ತನ್ನ ತೆಳ್ಳಗಿನ ಸೊಂಟ ಕುಲುಕಿದ್ದಳು.

ಈಗ ಇವರಿಬ್ಬರೂ ಸಹ ಏಕಕಾಲದಲ್ಲಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ತಾವು ಹೆತ್ತವರಾಗುತ್ತಿರುವ ಸುದ್ದಿಯನ್ನು ಭಾನುವಾರ ಹಂಚಿಕೊಂಡಿದ್ದಾರೆ. ಆದರೆ, ಆಶ್ಚರ್ಯವೆಂದರೆ ಇಬ್ಬರ ವಿವಾಹ ಮಾತ್ರ ಇನ್ನು ನಡೆದಿಲ್ಲ.

ಭಾರತೀಯ ಸಂಸ್ಕೃತಿಯ ಪ್ರಕಾರ ನೋಡಲು ಹೋದರೆ ನಾವು ಹೆತ್ತವರಾಗುವ ಮೊದಲು ಸಂಪ್ರದಾಯದಂತೆ ಗಂಡು – ಹೆಣ್ಣಿನ ಜಾತಕ ಹೊಂದಾಣಿಕೆ, ಭೇಟಿ, ನಿಶ್ಚಿತಾರ್ಥ ಇದಾದ ಬಳಿಕ ಹಿರಿಯರ ಹಾಗೂ ಹತ್ತು ಮಂದಿ ಊರವರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯುತ್ತದೆ. ಇಷ್ಟೆಲ್ಲಾ ಆದ ಬಳಿಕ ನವ ದಂಪತಿಗಳ ಸಮ್ಮಿಲನ, ಫಲವಾಗಿ ಮಗುವಿನ ಜನನ.

ಆದರೆ ಫಾರಿನ್, ಸಿನೆಮಾ ಹಾಗೂ ಕ್ರಿಕೆಟ್ ನ ಸ್ಟೈಲ್ ನಲ್ಲಿ ಇದೆಲ್ಲ ಯಾವುದೂ ಇಲ್ಲ. ಅಲ್ಲಿ ಮೊದಲು ಹೆಣ್ಣಿನಲ್ಲಿ ಅಂದ ಮತ್ತು ಗಂಡಿನಲ್ಲಿ ಸಂಪತ್ತು ನೋಡುವುದು. ನಂತರ ಗಾಳ ಹಾಕುವುದು, ಗಾಳಕ್ಕೆ ಬಿದ್ದರೆ ಮತ್ತೆ ಚಾಟಿಂಗ್ – ಡೇಟಿಂಗ್ ಇದಾದ ಬಳಿಕ ಪಬ್ಬು- ಪಾರ್ಟಿ, ತದನಂತರ ದುಬಾರಿ ಗಿಫ್ಟ್ , ಮತ್ತೆ ಸುತ್ತಾಟ – ತಿರುಗಾಟ ಇದೆಲ್ಲ ಆದ ಬಳಿಕ ಒಂದು ಮಗು ಕೈಗೆ ಬರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ನಂತರ ಮದುವೆಯ ಬಗ್ಗೆ ಆಲೋಚನೆ ಮಾಡುತ್ತಾರೆ. ಇಷ್ಟಪಟ್ಟೋ ಅಥವಾ ಮಗುವಿನ ಕಾರಣ ಕಷ್ಟಪಟ್ಟೋ ಕೊನೆಗೆ ವಿವಾಹ ನಡೆಯುತ್ತದೆ. ಒಂದೇ ವಾರದಲ್ಲಿ ವಿಚ್ಛೇದನ ನಡೆದ ನಿದರ್ಶನಗಳು ಸಹ ಇವೆ.

ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಆಟಗಾರರಾಗಿದ್ದು ಹಾಗೂ ಅವರ ಗೆಳತಿ‌ ನತಾಶಾ ಅವರು ಸರ್ಬಿಯಾದ ನಟಿ ಆಗಿದ್ದು, ಇಬ್ಬರೂ ಪ್ರಣಯದ ಲೋಕದಲ್ಲಿ ಈಜು ಹೊಡೆದು ತೇಲಾಡಿದವರು. ಇದರ ಪ್ರತೀಕವಾಗಿ ಇಂದು ನತಾಶಾ ಅವರು ಗರ್ಭಿಣಿಯಾಗಿದ್ದಾರೆ. ಆದರೆ ಸಮಾಧಾನಕರ ಸಂಗತಿ ಎಂದರೆ ಇವರು ಇನ್ನು ಪರಸ್ಪರ ವಿವಾಹವಾಗುವ ಮನಃಸಂಕಲ್ಪ ಹೊಂದಿದ್ದಾರೆ

Leave A Reply

Your email address will not be published.