ಕೊರೋನಾ ಭಯದ ನಡುವೆ ಶುಭಸುದ್ದಿ: ಗುಣಮುಖರಾಗುತ್ತಿದ್ದಾರೆ ಹೆಚ್ಚಿನ ಸೋಂಕಿತರು

ದೆಹಲಿ: ದೇಶದಲ್ಲಿ ಕೋವಿಡ್ ಪಾಸಿಟಿವ್ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಇನ್ನೊಂದೆಡೆಯಿಂದ ಗುಣಮುಖರಾಗುವ ಅವರ ಸಂಖ್ಯೆಯೂ ಹೆಚ್ಚುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಅತ್ತ ಕೇಂದ್ರ ಆರೋಗ್ಯ ಸಚಿವಾಲಯ ದೇಶದ ಪ್ರಜೆಗಳಿಗೆ ಶುಭಸುದ್ದಿ ರವಾನಿಸುತ್ತಿದೆ. ಸದ್ಯ ಸೋಂಕಿತರಲ್ಲಿ ಸುಮಾರು 50 ಪ್ರತಿಶತ ಸಮೀಪ ಸೋಂಕಿತರು ಗುಣಮುಖರಾಗುತ್ತಿದ್ದಾರೆ.

ಮೇ ತಿಂಗಳ 30ರಂದು ಒಂದೇ ದಿನ 11264 ಸೋಂಕಿತರು ಗುಣಮುಖರಾಗಿದ್ದು ಇದು ಒಂದು ದಿನದ ಚೇತರಿಕೆಯ ದಾಖಲೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಚೇತರಿಕೆ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನರು ಕೊರೋನ ಹರಡುವಿಕೆಯಿಂದ ಹೆಚ್ಚು ಆತಂಕಕ್ಕೊಳಗಾಗಿದ್ದು ಇನ್ನೊಂದೆಡೆಯಲ್ಲಿ ಗುಣಮುಖರಾಗುತ್ತಿರುವವರ ಸುದ್ದಿ ತಿಳಿದು ನಿರಾಳ ರಾಗುತ್ತಿದ್ದಾರೆ.

ಏನೇ ಆಗಲಿ ಜಗತ್ತಿಗೇ ಸವಾಲ್ ಓಡ್ಡುತ್ತಿರುವ ಕೊರೋನಾ ವೈರಸ್ ಗೆ ಭಾರತ ಪುನಃ ಸವಾಲೆಸಗಿದೆ.

ಭಾರತದಲ್ಲಿ ಇದುವರೆಗೆ 90 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

Leave A Reply

Your email address will not be published.