ಮತ್ತೆ ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ | ಕೇಂದ್ರ ಸರಕಾರದ ಆದೇಶ
ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಲಾಕ್ ಡೌನ್ 4.0 ನಾಳೆ ಮುಗಿಯಲಿದ್ದು, ಜೂನ್ 1 ರಿಂದ ಲಾಕ್ ಡೌನ್ 5.0 ಜಾರಿಗೆ ಬರಲಿದೆ. ಮುಂದಿನ ಒಂದು ತಿಂಗಳ ಕಾಲ ಅಂದರೆ ಜೂನ್ 30ರವರೆಗೆ ಲಾಕ್ ಡೌನ್ ಮತ್ತೆ ವಿಸ್ತರಣೆ ಮಾಡಲಾಗಿದೆ.
ಕೇಂದ್ರ ಗೃಹ ಇಲಾಖೆಯ ಮಾಹಿತಿಯ ಮೇರೆಗೆ ಮುಂಬೈ, ದೆಹಲಿ, ಅಹಮದಾಬಾದ್, ಕೊಲ್ಕತ್ತಾ, ಚೆನೈ, ಜೈಪುರ, ಚೆಂಗಾಲಪಟ್ಟು, ತಿರುವಳ್ಳೂರು, ಇಂದೋರ್, ಜೋದ್ ಪುರ, ಹೈದ್ರಾಬಾದ್, ಥಾಣೆ ಹಾಗೂ ಜೈಪುರ ಈ 13 ನಗರಗಳಲ್ಲಿ ಕನಿಷ್ಟ ಎರಡುವಾರಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ 5.0 ಘೋಷಣೆ ಮಾಡುವುದು ಖಚಿತವಾಗಿದೆ.
ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಜೂನ್ 8 ರಿಂದ ಧಾರ್ಮಿಕ ಸ್ಥಳಗಳು, ಮಾಲ್, ಹೋಟೆಲ್, ರೆಸ್ಟೋರೆಂಟ್ ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ.
ಇನ್ನು ಜುಲೈ ನಂತರವೇ ಶಾಲೆ, ಕಾಲೇಜುಗಳನ್ನು ಆರಂಭಿಸಲು ಪೋಷಕರ ಜೊತೆ ಚರ್ಚಿಸಿ ನಂತರ ಅನುಮತಿ ನೀಡುವುದಾಗಿ ಹೇಳಿದೆ.
ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ಇದ್ದ ಕರ್ಪ್ಯೂ ಅವಧಿಯನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಡಿತ ಮಾಡಿದೆ.ಇನ್ನು ಅಂತರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು ಮುಕ್ತವಾಗಿ ಯಾವುದೇ ಪಾಸ್ ಇಲ್ಲದೆ ಸಂಚರಿಸಬಹುದು. ಅದೇರೀತಿ ದೇಶದಾದ್ಯಂತ ಜೂನ್ 8ರಿಂದ ದೇಗುಲ, ಚರ್ಚ್, ಮಸೀದಿ ತೆರೆಯಲು ಅನುಮತಿಯನ್ನು ನೀಡಲಾಗಿದೆ.
ಪರಿಸ್ಥಿತಿಯನ್ನ ಆಧರಿಸಿ ಮೆಟ್ರೋ, ರೈಲು ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ವಿಮಾನ ಒಂದು ತಿಂಗಳು ಇಲ್ಲ. ಜುಲೈ ನಂತರ ವೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುವ ಸಾಧ್ಯತೆ.
ಇನ್ನು ಮದ್ಯದಂಗಡಿ ಕಾಲಾವಧಿ ರಾತ್ರಿ 9 ಗಂಟೆ ತನಕ ಸಮಯ ವಿಸ್ತರಣೆ ಸಾಧ್ಯತೆ.
ವೃದ್ಧರಿಗೆ, ಗರ್ಭಿಣಿಯರಿಗೆ ಮತ್ತು ಹತ್ತು ವರುಷದ ಕೆಳಗಿನ ಮಕ್ಕಳಿಗೆ ಓಡಾಟಕ್ಕೆ ಅವಕಾಶ ಇಲ್ಲ.
ಸಿನಿಮಾ, ಜಿಮ್, ಸ್ವಿಮ್ಮಿಂಗ್ ಪೂಲ್ ಗಳಿಗೆ ಯಾವುದು ವಿನಾಯಿತಿ ಇಲ್ಲ. ಜಾಗಿಂಗ್, ವಾಕಿಂಗ್ ಗೆ ಅವಕಾಶ.
ಬಟ್ಟೆ ಅಂಗಡಿ, ಫ್ಯಾಕ್ಟರಿ, ಎಂದಿನಂತೆ ಓಪನ್.
ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ ಸಮಾರಂಭ ಗಳಿಗೆ ಅವಕಾಶ ಇಲ್ಲ.