ಮಾಸ್ಕ್ ಧರಿಸದೆ ಬಂದ ಗ್ರಾಹಕನ ಪ್ರಶ್ನಿಸಿದ ಸಿಬಂದಿ |ಪುತ್ತೂರು ರಿಲಾಯನ್ಸ್ ಸ್ಮಾರ್ಟ್ನಲ್ಲಿ ಮಾತಿನ ಚಕಮಕಿ ,ಹಲ್ಲೆ | FIR ದಾಖಲು | ಪ್ರಕರಣಕ್ಕೆ ಮರುಜೀವ
ಪುತ್ತೂರು: ಮಾಸ್ಕ್ ಧರಿಸದೆ ಬಂದ ಗ್ರಾಹಕರೊಬ್ಬರನ್ನು ಪ್ರಶ್ನಿಸಿದ ವಿಚಾರದಲ್ಲಿ ಸಿಬಂದಿ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆದ ಘಟನೆ ದರ್ಬೆ ರಿಲಯನ್ಸ್ ಮಾರ್ಟ್ ನಲ್ಲಿ ಮೇ 26ರಂದು ನಡೆದಿದ್ದು,ರಾಜಿ ಮಾತುಕತೆಯ ಮೂಲಕ ಬಗೆಹರಿಸಲಾಗಿತ್ತು.ಇದೀಗ ಘಟನ ಸಂಭಧಿಸಿದಂತೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರೋರ್ವರು ಮಾಸ್ಕ್ ಧರಿಸದ್ದೆ ರಿಲಾಯನ್ಸ್ ಮಳಿಗೆಯನ್ನು ಪ್ರವೇಶಿಸಿದ್ದರು. ಆದರೆ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವೇ ಕಡ್ಡಾಯ ಮಾಸ್ಕ್ ಧರಿಸಬೇಕೆಂಬ ಸೂಚನೆಯೇ ಇದ್ದಾಗ ಗ್ರಾಹಕ ಮಾಸ್ಕ್ ಧರಿಸದೆ ಒಳ ಪ್ರವೇಶಿಸಿದ್ದನ್ನು ಸಂಸ್ಥೆಯ ಸಿಬಂದಿ ಪ್ರಶ್ನಿಸಿದ್ದರು.
ಈ ಕುರಿತು ಯುವಕ ಮತ್ತು ಸಂಸ್ಥೆಯ ಸಿಬಂದಿ ಮಧ್ಯೆ ಮಾತಿನ ಚಕಮಕಿ ನಡೆದು ಕೊನೆಗೆ ಪರಸ್ಪರ ಹಲ್ಲೆಯೂ ನಡೆದಿತ್ತು. ಇದೇ ಸಂದರ್ಭ ಆಗಮಿಸಿದ ಪೊಲೀಸರು ಯುವಕನನ್ನು ಠಾಣೆಗೆ ಕರೆದೊಯ್ದರು. ಬಳಿಕ ಠಾಣೆಯಲ್ಲಿ ಇನ್ಸ್ಪೆಕ್ಟರ್ ಸಮಕ್ಷಮದಲ್ಲಿ ಸಂಸ್ಥೆ ಮತ್ತು ಯುವಕನ ಕಡೆಯುವರು ಮಾತುಕತೆ ನಡೆಸಿ ಮುಚ್ಚಳಿಕೆ ಬರೆಸಿ ರಾಜಿಯಲ್ಲಿ ಇತ್ಯರ್ಥ ಗೊಳಿಸಿದ್ದರು. ಆದರೆ ಇದೀಗ ಸಂಸ್ಥೆಯ ಸುಪರ್ವೈಸರ್ ಚಿದಾನಂದ ಅವರು ದೂರು ನೀಡಿದ್ದು,ಸಂಸ್ಥೆಯ ಸಿಬಂದಿ ಅಂಕಿತ್ ಎಂಬರಿಗೆ ಹಲ್ಲೆ ನಡೆಸಿದ ಆರೋಪಿ ಜಬ್ಬಾರ್ ಕೂರ್ನಡ್ಕ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ತನ್ನ ಚಿಕ್ಕಮ್ಮನೊಂದಿಗೆ ಬಂದಿದ್ದ ಯುವಕರೋರ್ವರು ಮಾಸ್ಕ್ ಧರಿಸಿದೆ ಮಳಿಗೆಗೆ ಪ್ರವೇಶಿಸಿದ್ದರು.
ಆ ಸಂದರ್ಭ ಅವರನ್ನು ಯಾರೂ ತಡೆಯಲಿಲ್ಲ. ಕೊನೆ ಬಿಲ್ ಪಾವತಿ ಮಾಡುವ ಸಂದರ್ಭ ಫೋನ್ ಮಾಡಲೆಂದು ಮೊಬೈಲ್ಗಾಗಿ ಯುವಕ ತನ್ನ ದ್ವಿಚಕ್ರ ವಾಹನದ ಬಳಿಗೆ ಹೋಗಿ ಪುನಃ ಮಳಿಗೆಗೆ ಪ್ರವೇಶಿಸಿದ ವೇಳೆ ಮಳಿಗೆ ಸಿಬಂದಿ ಯುವಕ ಮಾಸ್ಕ್ ಧರಿಸದೆ ಒಳಪ್ರವೇಶಿಸುವಂತಿಲ್ಲ ಎಂದು ತಡೆದರು.
ಈ ಸಂದರ್ಭ ಸಿಬಂದಿ ಅಂಕಿತ್ ಮತ್ತು ಜಬ್ಬಾರ್ ನಡುವೆ ಮಾತಿನ ಚಕಮಕಿ ಬೆಳೆದು ಅದು ತಾರಕಕ್ಕೇರಿ ಹಲ್ಲೆಗೆ ಕಾರಣವಾಯಿತು.ಇನ್ನೋರ್ವ ಸಿಬಂದಿಯ ಮೇಲೆ ಹೆಲ್ಮೆಟ್ ನಿಂದ ಬಡಿದ ವಿಡಿಯೋ ಕೂಡ ಈಗ ವೈರಲ್ ಆಗಿದೆ.
ಹಲ್ಲೆಯಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ .ರಾಜಿಯಲ್ಲಿ ಮುಗಿದಿದ್ದ ಪ್ರಕರಣಕ್ಕೆ ಈಗ FIR ದಾಖಲಾಗುವ ಮೂಲಕ ಮರುಜೀವ ಬಂದಿದೆ.