ಬೆಂಗಳೂರು | ಶಿಕ್ಷಕಿಯ ಬಳಿಯೂ ಸುಳಿಯಿತು ಕೋರೋನಾ ಸೋಂಕು
ರಾಜ್ಯ ದಲ್ಲಿ ದಿನೇ ದಿನೇ ಹೆಚ್ಚು ಕೋರೋನಾ ಸೋಂಕು ಕಂಡು ಬರುತ್ತಲೇ ಇದ್ದು, ಇದೀಗ ಬೆಂಗಳೂರಿನಲ್ಲಿ ಶಿಕ್ಷಕಿಯೋರ್ವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಲಾಕ್ ಡೌನ್ ಇರುವ ಕಾರಣ ಮನೆಯಲ್ಲೇ ಇರುವುದರಿಂದ ಕೋರೋನಾ ಈ ವರ್ಗಕ್ಕೆ ತಟ್ಟಿ ರಲಿಲ್ಲ.
ಇದೀಗ ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ 48 ವರ್ಷದ ಶಿಕ್ಷಕಿಗೆ ಕೋರೋನಾ ಸೋಂಕಿನ ಲಕ್ಷಣವಾದ ಶ್ವಾಸಕೋಶದ ಸಮಸ್ಯೆ ಕಂಡು ಬಂದ ಕೂಡಲೇ ಶಿಕ್ಷಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಶಿಕ್ಷಕಿಯ ಗಂಟಲು ದ್ರವವನ್ನು ಕೋರೋನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಶಿಕ್ಷಕಿಯನ್ನು ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸೋಂಕಿತ ಶಿಕ್ಷಕಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ.