ದೆಹಲಿಯ ಸ್ಲಮ್ ನಲ್ಲಿ ಭಾರೀ ಅಗ್ನಿ ದುರಂತ | 1500 ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ಹೊಸದಿಲ್ಲಿ: ಕೊಳಚೆಗೇರಿಯು ಆಗ್ನೇಯ ದಿಲ್ಲಿಯ ತುಘಲಕ್‌ಬಾದ್ ಪ್ರದೇಶದಲ್ಲಿದ್ದು, ಸೋಮವಾರ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ.

ತುಘಲಕ್‌ನಗರ ಪ್ರದೇಶದಲ್ಲಿರುವ ಸ್ಲಂಗಳಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯು ನಮಗೆ ರಾತ್ರಿ 1 ಗಂಟೆಗೆ ತಲುಪಿತು. ಎಲ್ಲ ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿದೆವು. ಸುಮಾರು 1ರಿಂದ 2 ಸಾವಿರ ಗುಡಿಸಲುಗಳಿಗೆ ಬೆಂಕಿ ತಗಲಿದೆ ಎಂದು ಆಗ್ನೇಯ ದಿಲ್ಲಿಯ ಪೊಲೀಸ್ ಉಪ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ ಹೇಳಿದ್ದಾರೆ.
ರಾತ್ರಿ 12:50ಕ್ಕೆ ಅಗ್ನಿ ಅನಾಹುತದ ಮಾಹಿತಿ ಪಡೆದ ಅಗ್ನಿ ಶಾಮಕ ದಳದ 28 ಯಂತ್ರಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿದುಬಂದಿದೆ.

ಬೆಂಕಿಯನ್ನು ಸರಿಸುಮಾರು ಮುಂಜಾನೆ 3:40ಕ್ಕೆ ಹತೋಟಿಗೆ ತರಲಾಗಿದ್ದು, ಆದರೆ ಆಗಲೇ ಸುಮಾರು 1,500 ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದವು. ಹೀಗಾಗಿ ಹಲವು ಜನರು ಮನೆ ಕಳೆದುಕೊಂಡಿದ್ದಾರೆ.

ಬೆಂಕಿ ತಗುಲಿದೆ ವಿಚಾರ ತಿಳಿಯುತ್ತಿದ್ದಂತೆಯೇ ಹೆಚ್ಚಿನ ಜನರು ಗುಡಿಸಲಿನಿಂದ ಹೊರಬಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಗ್ನಿಶಾಮಕದಳದ ಕಾರ್ಯಾಚರಣೆ ಮುಂದುವರಿದಿದ್ದು, ಈ ತನಕ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.

Leave A Reply

Your email address will not be published.