ಪ್ರಶಾಂತ ಶೆಟ್ಟಿಯ ಕೈ ಚಲಕ | ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿ ಕೇವಲ 300 ರೂ.ನಲ್ಲಿ ಸಾನಿಟೈಸರ್ ಸ್ಟೇಂಡ್ ನಿರ್ಮಾಣ
ಬೆಳ್ಳಾರೆ : ವಿಶ್ವಾದ್ಯಾಂತ ಪಸರಿಸಿದ ಮಹಾಮಾರಿ ಕೋರೋನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲೇ ದೇವಿ ಹೈಟ್ಸ್ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು ವ್ಯವಹಾರಿಕ ಕಟ್ಟಡದಲ್ಲಿ ಸೂಪರ್ ವೈಸರ್ ಆಗಿ ದುಡಿಯುತ್ತಿರುವ ಪ್ರಶಾಂತ್ ಶೆಟ್ಟಿ ಎಂಬ ಯುವಕ ಭಯಾನಕ ಕೊರೋನಾ ತಡೆಗಾಗಿ ಸರಳವಾಗಿ ಅತೀ ಕಡಿಮೆ ವೆಚ್ಚದಲ್ಲಿ ಪ್ರತೀ ಅಂಗಡಿಯ ಮುಂಭಾಗದಲ್ಲಿ ಪಿವಿಸಿ ಪೈಪ್ ನಿಂದ ನಿರ್ಮಿತವಾದ ಸ್ಯಾನಿಟೈಸರ್ ಸ್ಟ್ಯಾಂಡ್ ನ್ನು ನಿರ್ಮಿಸಿದ್ದಾರೆ.
ಹೊರಗಿನಿಂದ ಇಂಥಹ ವ್ಯವಸ್ಥಿತ ಸ್ಠೇಂಡ್ ಖರೀದಿಸಲು ಸುಮಾರು 2 ರಿಂದ 3 ಸಾವಿರ ತಗಲುತ್ತದೆ. ಆದರೆ ಅಂಗಡಿಗಳು ಮುಂಗಟ್ಟುಗಳು ಕಳೆದ ಕೆಲವು ತಿಂಗಳುಗಳಿಂದ ತೆರೆಯದೆ ಇರುವುದರಿಂದ, ವ್ಯಾಪಾರ ವಿಲ್ಲದೆ ಅಷ್ಟು ದುಬಾರಿ ಹಣ ಪಾವತಿಸಲು ಆಗದ ಜನರಿಗಾಗಿಯೆ ಪ್ರಶಾಂತ್ ಶೆಟ್ಟಿ ಯವರು ಅಗ್ಗದ ಸ್ಟ್ಯಾಂಡ್ ತಯಾರಿಸಿ ಕೊಟ್ಟಿದ್ದಾರೆ. ಅದರ ಬೆಲೆ ಕೇವಲ 300 ರೂಪಾಯಿಗಳು.
ಇತ್ತೀಚಿನ ಸಂದಿಗ್ದ ಪರಿಸ್ಥಿತಿಯನ್ನು ತನ್ನ ಮನದಲ್ಲಿಟ್ಟು ಅಂಗಡಿಯವರಿಗೆ ಇನ್ನಷ್ಟು ಭಾರವನ್ನು ಜನರ ಹೆಗಲ ಮೇಲೆ ಇಡಬಾರದು ಎಂಬ ಮಾನವೀಯ ದೃಷ್ಟಿಯಿಂದ ಕೇವಲ 300 ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದೇನೆ ಎನ್ನುತ್ತಾರೆ ಸ್ಟ್ಯಾಂಡ್ ನಿರ್ಮಿಸಿದ ಪ್ರಶಾಂತ್ ಶೆಟ್ಟಿ.
ಲಾಕ್ ಡೌನ್ ಸಂಧರ್ಭದಲ್ಲಿ ದೇವಿ ಹೈಟ್ಸ್ ಮಾಲಕರಾದ ರಾಕೇಶ್ ಶೆಟ್ಟಿ ಲಕ್ಷಾಂತರ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದ ಬೆನ್ನಲೇ, ಅವರ ದೇವಿ ಹೈಟ್ಸ್ ನಲ್ಲಿ ಸೂಪರ್ ವೈಸರ್ ಆಗಿರುವ ಪ್ರಶಾಂತ್ ಶೆಟ್ಟಿಯವರ ಈ ಪ್ರಯತ್ನ ಮತ್ತು ಅತ್ಯಂತ ಕಡಿಮೆ ಬೆಲೆಗೆ ಸ್ಯಾನಿಟೈಸರ್ ಸ್ಟ್ಯಾಂಡ್ ದೊರೆಯುವಂತೆ ಮಾಡಿದ ಪ್ರಶಾಂತ್ ಶೆಟ್ಟಿ ಅವರ ಮಾನವೀಯತೆಯ ನಡೆ ಈ ಮೂಲಕ ಅನಾವರಣಗೊಂಡಿದೆ.