ಸುಳ್ಯ | ಕಾರು ಚಲಾಯಿಸುತ್ತಿದ್ದ ವೇಳೆ ವ್ಯಕ್ತಿ ಹೃದಯಾಘಾತದಿಂದ ಸಾವು

ಸುಳ್ಯ: ನಗರದ ಮುಖ್ಯರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಡೆಕೋಲು ಗ್ರಾಮದ ಕೇನಾಜೆಯ ಪೋಕರ್ ಕುಂಇ್ ಎಂದು ಗುರುತಿಸಲಾಗಿದೆ.

ಮಧ್ಯಾಹ್ನ ವೇಳೆ ಸುಳ್ಯ ಪೋಲೀಸ್ ಠಾಣೆ ಸಮೀಪ ಪೋಕರ್ ಕುಂಇ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಕಾರು ಸ್ಕೂಟಿಯೊಂದಕ್ಕೆ ತಾಗಿದ್ದಲ್ಲದೇ, ಮುಂದಕ್ಕೆ ಬಂದು‌ ಮತ್ತೊಂದು ಕಾರಿಗೆ ತಾಗಿ ನಿಂತಿತು. ಅವರು ಕಾರಿನ ಸ್ಟೇರಿಂಗ್ ಗೆ ತಲೆ ತಗ್ಗಿಸಿ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯ ತರಕಾರಿ ಅಂಗಡಿಯವರು ಬಂದು ಕಾರಿನ ಹ್ಯಾಂಡ್ ಬ್ರೇಕ್ ಹಾಕಿ ಕಾರು ನಿಲ್ಲಿಸಿದರು ಎನ್ನಲಾಗಿದೆ.

ತಕ್ಷಣ ಅಲ್ಲಿ ಸೇರಿದ್ದ ಜನರು ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.

Leave A Reply

Your email address will not be published.