ಸುರತ್ಕಲ್ ನ ಅತ್ಯಾಚಾರ ಪ್ರಕರಣ ಸುಳ್ಳು ಎಂದು ಪ್ರೂವ್ ಮಾಡಲು ದೈವದ ಮೊರೆ ಹೋದರು

ಸುರತ್ಕಲ್ ನಲ್ಲಿ ನಡೆದ ಮಹಿಳೆಯ ಮೇಲಿನ ಅತ್ಯಾಚಾರದ ಪ್ರಕರಣ ಸುಳ್ಳು ಎಂದು ಕಾಟಿಪಳ್ಳ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಎ.ಪಿ. ಮೋಹನ್ ತಿಳಿಸಿದ್ದಾರೆ. ಇದಕ್ಕಾಗಿ ಸುಳ್ಳು ದೂರು ನೀಡಿದವರನ್ನು ದೈವ-ದೇವರುಗಳೇ ಶಿಕ್ಷಿಸಲಿ ಎಂದು ಟ್ರಸ್ಟ್ ನ ಸದಸ್ಯರು ದೈವದ ಮೊರೆ ಹೋಗಿದ್ದಾರೆ.

ಘಟನಾ ವಿವರ :
ಸೇವಾ ಚಾರಿಟೇಬಲ್ ಟ್ರಸ್ಟ್ ನ ಹೆಸರನ್ನು ಹಾಳು ಮಾಡಲು ಹಾಗೂ ಟ್ರಸ್ಟಿನ ಸದಸ್ಯರಿಗೆ ಕೆಟ್ಟ ಹೆಸರು ಬರುವ ಸಲುವಾಗಿ ಷಡ್ಯಂತ್ರ ನಡೆಸಲಾಗಿದೆ ಎಂದು ಎ.ಪಿ. ಮೋಹನ್ ಅವರು ತಿಳಿಸಿದರು.

ಅದೇ ರೀತಿ ಈ ರೀತಿ ಸುಳ್ಳು ಮೊಕದ್ದಮೆ ನೀಡಿದ ವ್ಯಕ್ತಿಗಳನ್ನು ಹಾಗೂ ಅವರಿಗೆ ಪ್ರಚೋದನೆ ನೀಡಿದವರನ್ನು ಸರಿಯಾದ ಕ್ರಮದಲ್ಲಿ ಶಿಕ್ಷಿಸಬೇಕೆಂದು ಕಾಟಿಪಳ್ಳ ಗಣೇಶಪುರ ಕಾರಣಿಕ ದೈವದ ಕ್ಷೇತ್ರವಾದ ಬ್ರಹ್ಮ ಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನದಲ್ಲಿ ಹಾಗೂ ಕ್ಷೇತ್ರದ ಶ್ರೀ ಕೊರಗಜ್ಜ ದೈವವನ್ನು ಒಳಗೊಂಡಂತೆ ಪರಿವಾರ ದೈವಗಳಲ್ಲಿ ಪ್ರಾರ್ಥನೆ ನಡೆಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಗುರಿಕಾರರು, ಟ್ರಸ್ಟ್ ನ ಅಧ್ಯಕ್ಷರಾದ ಎಪಿ ಮೋಹನ್, ಕಾರ್ಯದರ್ಶಿಗಳಾದ ದಿನೇಶ್ ಸುವರ್ಣ, ಕೋಶಾಧಿಕಾರಿ ಸಂದೀಪ್ ಕುಮಾರ್ ಹಾಗೂ ಇನ್ನಿತರ ಪ್ರಮುಖರು,ಟ್ರಸ್ಟ್ ನ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.