ಸುರತ್ಕಲ್ | ಪಿಡ್ಕ್ ಹೊಡೆದು ಬಾಟಲಿ ಬಿಸಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆಯಿತು ರೇಪ್ !

ಲಾಕ್ ಡೌನ್ ಮುಗಿಯುತ್ತಿದ್ದಂತೆ ಪೋಲಿ ಯುವಕರ ತಂಡವೊಂದು ಚಿಕನ್ ಮಟನ್ ಹೊಡೆದು ಜೊತೆಗೆ ಎಣ್ಣೆ ಹೀರಿ ಮಜಾ ಮಾಡಿದ್ದರು. ಅಷ್ಟೇ ಅಲ್ಲದೆ ಎಣ್ಣೆಯ ನಶೆಯಲ್ಲಿ ತೇಲಾಡುತ್ತಾ ಬಾಟಲ್ ಗಳನ್ನು ಬೇರೊಬ್ಬರ ಮನೆ ಬಳಿ ಎಸೆದಿದ್ದರು.

ಇದನ್ನು ಕಂಡ ಬಾಟಲ್ ಎಸೆದ ಪಕ್ಕದ ಮನೆಯ ಮಹಿಳೆಯೊಬ್ಬರು ಯುವಕರನ್ನು ಈ ಬಗ್ಗೆ ಪ್ರಶ್ನಿಸಿದರು. ಆದರೆ ಮಹಿಳೆಯ ಮೇಲೆ ಕಾಮುಕ ರವೀಂದ್ರ ಆಚಾರಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲಿನ ಉಳಿದ ಕುಡುಕರು ಅದಕ್ಕಿಂತ ಮೊದಲು ಬಟ್ಟೆ ಹರಿದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಘಟನೆ ನಡೆದ ವೇಳೆ ಮಹಿಳೆಯ ಪತಿ ಕೂಡಾ ಮನೆಯಲ್ಲೇ ಇದ್ದು, ಪತಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದೆ.

ಮಂಗಳೂರಿನ ಸುರತ್ಕಲ್ ವ್ಯಾಪ್ತಿಯ ನಿತ್ಯಾನಂದ ಭಜನಾ ಮಂದಿರದ ಹತ್ತಿರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಆರೋಪಿಗಳನ್ನು ರವೀಂದ್ರ ಆಚಾರಿ, ಎ.ಪಿ.ಮೋಹನ್ ಗಣೇಶಪುರ, ಹರ್ಷಿತ್, ಸುಧಾಕರ ಬೊಳ್ಳಾಜೆ ಎಂದು ಗುರುತಿಸಲಾಗಿದ್ದು, ಇವರನ್ನು ಪೋಲೀಸರು ಬಂಧಿಸಿದ್ದಾರೆ.

Leave A Reply

Your email address will not be published.