ಮಲ್ಪೆ| ಚಂಡಮಾರುತ ಪ್ರಭಾವ ಮೀನುಗಾರಿಕಾ ಬೋಟ್ ಮುಳುಗಡೆ

ಮಲ್ಪೆ: ಸಮುದ್ರದಿಂದ ತೀರಕ್ಕೆ ಸಮೀಪಿಸುತ್ತಿದ್ದ ಬೋಟ್ ಒಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮುಳುಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.ಇದು ಮೀನುಗಾರಿಕೆಗೆ ತೆರಳಿದ್ದ ಬೋಟ್ ಆಗಿತ್ತು ಎಂದು ತಿಳಿದುಬಂದಿದೆ.

ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದೆ. ಗಾಳಿ ಜೋರಾಗಿ ಬೀಸಿದ್ದರ ಪರಿಣಾಮವಾಗಿ ಬೋಟ್ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ.

ಈ ದೃಶ್ಯವನ್ನು ಕಂಡ ಕೆಲವರು ಬೋಟ್ ನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೋಟ್ ನಲ್ಲಿ ಎಷ್ಟು ಮಂದಿ ಇದ್ದರೆಂಬ ಬಗ್ಗೆ ಯಾವುದೇ ನಿಖರ ಮಾಹಿತಿ ದೊರೆತಿಲ್ಲ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಬರಬೇಕಾಗಿದೆ .

Leave A Reply

Your email address will not be published.